ಕ್ರೆಡಿಟ್ ಕಾರ್ಡ್ ಶಾಪಿಂಗ್ ನಲ್ಲಿ ರಿಯಾಯಿತಿ
ಹೊಸದಿಲ್ಲಿ, ಜೂನ್ 17: ಅನೇಕ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್ ಶಾಪಿಂಗ್‌ನಲ್ಲಿ ರಿಯಾಯಿತಿ, ಕ್ಯಾಶ್‌ಬ್ಯಾಕ್ ಅಥವಾ ಆಫರ್ ನೀಡುತ್ತಿವೆ. ಈ ಶಾಪಿಂಗ್ ರಿಯಾಯಿತಿಯಲ್ಲಿ ನೀವು ಮೊಬೈಲ್ ಫೋನ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿಸಬಹುದು.

ಯಾವ ಬ್ಯಾಂಕುಗಳು ಎಷ್ಟು ರಿಯಾಯಿತಿ ನೀಡುತ್ತಿವೆ ಎಂಬ ವಿವರ ಇಲ್ಲಿದೆ.
ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ :
ನೀವು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಫ್ಲಿಪ್‌ಕಾರ್ಟ್‌ನಲ್ಲಿ ನೀವು ಗೃಹೋಪಯೋಗಿ ವಸ್ತುಗಳನ್ನು ಜೂನ್ 13 ರಿಂದ-17 ರವರೆಗೆ 10 ಪ್ರತಿಶತ ತ್ವರಿತ ರಿಯಾಯಿತಿಯೊಂದಿಗೆ ಶಾಪಿಂಗ್ ಮಾಡಬಹುದು. ಅಷ್ಟೇ ಅಲ್ಲ ನೀವು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಬುಕಿಂಗ್.ಕಾಮ್ / ಸಿಟಿನ್‌ನಲ್ಲಿ ಹೋಟೆಲ್ ಬುಕಿಂಗ್ ಗೆ ಪ್ರತಿಶತ 10 ರಷ್ಟು ರಿಯಾಯಿತಿ ಪಡೆಯಬಹುದು ಮತ್ತು ಈ ರಿಯಾಯಿತಿ ಡಿಸೆಂಬರ್ 31, 2020 ರವರೆಗೆ ಇರುತ್ತದೆ
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ರಿಯಾಯಿತಿ:
ನೀವು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ, 10 ಪ್ರತಿಶತ ರಿಯಾಯಿತಿಯೊಂದಿಗೆ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಬಹುದು.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್
ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವುದಾದರೆ, ಶೇಕಡಾ 28 ರಷ್ಟು ರಿಯಾಯಿತಿಯಲ್ಲಿ ನೀವು ತಾಲಿಸ್ಮನ್ ಬ್ರಾಂಡ್‌ನಲ್ಲಿ ಶಾಪಿಂಗ್ ಮಾಡಬಹುದು. ಈ ರಿಯಾಯಿತಿ 31 ಜುಲೈ 2020 ರವರೆಗೆ ಇದೆ.








