ಬೆಂಗಳೂರು : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಫಲಿತಾಂಶ ನಾಳೆ ಬಿಡುಗಡೆಯಾಗಲಿದ್ದು, ಇದರ ನಡುವೆಯೇ ಆನೇಕಲ್ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ಚೊಂಬು ಶಾಸ್ತ್ರದ ಮೊರೆ ಹೋಗಿದ್ದಾರೆ.
ಆನೇಕಲ್ (Anekal) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ (Congress – BJP) ನಡುವೆ ಜಿದ್ದಾಜಿದ್ದಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ ಹಾಗೂ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ನಡುವೆ ಬಿಗ್ ಫೈಟ್ ಇದೆ. ಹೀಗಾಗಿ ನಾಳೆ ಹೊರ ಬೀಳುವ ಫಲಿತಾಂಶದಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ. ಫಲಿತಾಂಶಕ್ಕೂ ಮುನ್ನ ಚೊಂಬು ಶಾಸ್ತ್ರ ಕೇಳಿದ್ದಾರೆ.
ಕಾಂಗ್ರೆಸ್ ಮೇಲುಗೈ ಸಾಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಚೊಂಬು ಶಾಸ್ತ್ರ ಕೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ವ್ಯಕ್ತಿಯೊಬ್ಬ ಕಂತೆ ಕಂತೆ ನೋಟು ಹಿಡಿದು ಬೆಟ್ಟಿಂಗ್ ಕಟ್ಟುತ್ತಿದ್ದ ವೀಡಿಯೋಗಳು ಹರಿದಾಡುತ್ತಿವೆ. ಹಣ, ಜಮೀನು, ಕುರಿ, ಕೋಳಿಗಳನ್ನು ಬೆಟ್ಟಿಂಗ್ ನಲ್ಲಿ ಕಟ್ಟಿದ್ದಾರೆ.








