ರಾಜ್ಯದ ನೂತನ ಸಿಎಂ ಆಗಿ ನಾಳೆ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಹಾಗೂಕಾರ್ಯಕರ್ತರು ಬೆಂಗಳೂರಿನ ಎಲ್ಲೆಡೆ ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿದ್ದಾರೆ. ಆದರೆ, ಅವುಗಳಲ್ಲಿ ಇಂಗ್ಲಿಷ್ ಬಳಸಲಾಗಿದೆ ಎಂಬ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅವುಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಫ್ರೀಡಂಪಾರ್ಕ್ ನಲ್ಲಿ ಹಾಕಿದ್ದ ಪೋಸ್ಟರ್ ಗೆ ಮಸಿ ಬಳಿದ ಕಾರ್ಯಕರ್ತರು, ಕನ್ನಡ ಬಳಸಿ ಎಂದು ಪೋಸ್ಟರ್ ನಲ್ಲಿ ಬರೆದು ಆ ನಂತರ ಅವುಗಳನ್ನು ಹರಿದು ಹಾಕಿದ್ದಾರೆ.
ಎರಡು ಕಡೆಗಳಲ್ಲಿ ನಲಪಾಡ್ ಅವರು ಇಂಗ್ಲಿಷ್ನಲ್ಲಿ ಶುಭಕೋರುವ ಪೋಸ್ಟರ್ಗಳನ್ನು ಹಾಕಿದ್ದಾರೆ ಪೋಸ್ಟರ್ನಲ್ಲಿ ಕನ್ನಡ ಬಳಸದ ಹಿನ್ನೆಲೆ ಕನ್ನಡಾಭಿಮಾನಿಗಳು ಪೋಸ್ಟರ್ಗೆ ಮಸಿ ಬಳಿದು ಹರಿದು ಹಾಕಿದ್ದಾರೆ.








