ಬೆಂಗಳೂರು : ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 18 ಗುರುವಾರ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಫೋಷಣೆ ಮಾಡಿದೆ. ಬಿಜೆಪಿ ಪಕ್ಷ ತಡರಾತ್ರಿ ತನ್ನ ಅಭ್ಯರ್ಥಿಗಳನ್ನು ಫೋಷಣೆ ಮಾಡಿದೆ. ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿಗಳಾಗಿ ಮಾಜಿ.ಸಚಿವ ಎಂಟಿಬಿ ನಾಗರಾಜ್. ಆರ್. ಶಂಕರ್, ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹಾ ನಾಯಕ್ ಕಣಕ್ಕಿಳಿದ್ದಾರೆ.
ಯಾವ ಕಾರಣಕ್ಕೆ ಇವರಿಗೆ ಟಿಕೆಟ್ ?
ಮೈತ್ರಿ ಸರ್ಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ರೆಬೆಲ್ಸ್ ವಿಧಾನ ಪರಿಷತ್ ಟಿಕೆಟ್ ನೀಡಲಾಗಿದೆ. ಆದರೆ ಮೈತ್ರಿ ಸರ್ಕಾರದ ಪನತಕ್ಕೆ ಪ್ರಮುಖರಾಗಿದ್ದ ಹೆಚ್. ವಿಶ್ವನಾಥ್ ಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಉಳಿದಂತೆ ನಾಲ್ವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿದೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಕಣಕ್ಕಿಳಿದ್ದರು. ಆದರೆ ಅಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಲ್ಲಿದ್ದ ಕಾರಣಕ್ಕೆ ಎಂಟಿಬಿ ನಾಗರಾಜ್ ಸೋಲು ಕಂಡಿದ್ದರು. ಹಾಗಾಗಿ ಅವರಿಗೆ ಸ್ವ ಪಕ್ಷೀರಿಂದಲೆ ಸೋಲು ಉಂಟಾಗಿದೆ. ಆದ್ದರಿಂದ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ಬಿಜೆಪಿ ರಾಜ್ಯ ನಾಯಕರು ತೀರ್ಮಾನಕ್ಕೆ ಬಂದು ಟಿಕೆಟ್ ನೀಡಿದ್ದಾರೆ.
ಇನ್ನೂ ಆರ್ ಶಂಕರ್ ಮೈತ್ರಿ ಸರ್ಕಾರದ ಪತನದ ಕಾರ್ಯಕ್ಕೆ ಬೆಂಬಲ ನೀಡಿದ್ದರು. ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಕಣಕ್ಕಿಳಿಯಬೇಕಿತ್ತು. ಆದರೆ ಪಕ್ಷದ ನಾಯಕರ ಮಾತಿಗೆ ಬೆಲೆ ಕೊಟ್ಟು ಚುನಾವಣೆ ಕಣದಿಂದ ದೂರ ಸರಿದರು. ಇದೆ ಕಾರಣಕ್ಕೆ ಅವರಿಗೆ ಪರಿಚತ್ ಟಿಕೆಟ್ ನೀಡಲಾಗಿದೆ ಎಂದು ಹೇಳಾಗಿದೆ.
ಸುನೀಲ್ ವಲ್ಯಾಪುರೆ ಅವರು ಎರಡು ಭಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಸಚಿವರಾಗಿದ್ದರು. ಮುಖ್ಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿದ್ದರು. ಆದ್ದರಿಂದ ಸುನೀಲ್ ವಲ್ಯಾಪುರೆಗೆ ವಿಧಾನಪರಿಷತ್ ಟಿಕೆಟ್ ನೀಡಲಾಗಿದೆ ಎಂದು ಹೇಳಾಗಿದೆ.
ಪ್ರತಾಪ್ ಸಿಂಹ ನಾಯಕ್ ಮೊದಲಿಂದ ನಳಿನ್ ಕುಮಾರ್ ಕಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಆ ಕಾರಣಕ್ಕೆ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಲಭ್ಯವಬಾಗಿದೆ ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿದೆ.







