ಬೆಂಗಳೂರು : ಕಾಂಗ್ರೆಸ್ ಸರ್ಕಾರವು ಈಗಾಗಲೇ 5 ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೊಳಿಸಿದೆ. ಆದರೆ, ಇಂದು ಅಧಿಕೃತವಾಗಿ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.
ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಕುರಿತು ಇಂದು ಆದೇಶ ನೀಡುವ ಸಾಧ್ಯತೆ ಇದೆ. ಗೃಹ ಲಕ್ಷ್ಮಿ ಯೋಜನೆಗೂ ಇಂದು ಸರ್ಕಾರಿ ಆದೇಶ ನೀಡಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.
ಕಡಿಮೆ ಮಾರ್ಗಸೂಚಿಯ ಆಧಾರದ ಮೇಲೆ ಇಂದು ಆದೇಶಗಳು ಪ್ರಕಟವಾಗುವ ಸಾಧ್ಯತೆ ಇದೆ.
ಸರಾಸರಿ ವಿದ್ಯುತ್ ಬಳಕೆ ಮೇಲೆ ಉಚಿತ ಕೊಡಲು ಜನರ ವಿರೋಧವಿದ್ದು, 200 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ರಾಜ್ಯಾದ್ಯಂತ ಆಗ್ರಹಿಸಿದ್ದಾರೆ. ಎಲ್ಲ ಗ್ಯಾರಂಟಿಗಳಲ್ಲಿಯೂ ಒಪ್ಪಿರುವ ಜನರು, ವಿದ್ಯುತ್ ಗ್ಯಾರಂಟಿಯಲ್ಲಿ ಆಕ್ಷೇಪ ಎತ್ತುತ್ತಿದ್ದಾರೆ. ನುಡಿದಂತೆ 200 ಯುನಿಟ್ ಉಚಿತ ವಿದ್ಯುತ್ ಕೊಡುವಂತೆ ತೀವ್ರ ಒತ್ತಾಯಿಸಿದ್ದಾರೆ. ಈ ವಿಚಾರ ಪರಿಗಣಿಸಿ ಉಚಿತ ವಿದ್ಯುತ್ ಆದೇಶದಲ್ಲಿ ಸರ್ಕಾರ ಬದಲಾವಣೆ ಮಾಡುತ್ತಾ..? ಅಥವಾ ವಾರ್ಷಿಕ ಬಳಕೆ ಮೇಲಿನ ಸರಾಸರಿ ಲೆಕ್ಕಾಚಾರದಲ್ಲಿಯೇ ಉಚಿತ ವಿದ್ಯುತ್ ಗೆ ಮಿತಿ ಹಾಕುತ್ತದೆಯೇ ಕಾಯ್ದು ನೋಡಬೇಕಿದೆ.








