ಬಹುನಿರೀಕ್ಷಿತಾ ಭಾರತೀಯ ಕುಸ್ತಿ ಫೆಡರೇಶನ್ನ ಚುನಾವಣೆ ಚುನಾವಣೆ ಐದು ದಿನ ತಡವಾಗಿ ನಡೆಯಲಿದ್ದು ಜು.11ಕ್ಕೆ ಮುಂದೂಡಲಾಗಿದೆ.ಮಹಾರಾಷ್ಟ್ರ, ಹರ್ಯಾಣ, ತೆಲಂಗಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ರಾಜ್ಯೆಡರೇಶನ್ಗಳು ಮೂರು ಸದಸ್ಯರ ಸಮಿತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕುಸ್ತಿ ಫೆಡರೇಶನ್ ಚುನಾವಣೆ ಐದು ದಿನ ಮುಂದೂಡಿದೆ.
ರಾಜ್ಯ ಫೇಡರೇಶನ್ ಗಳು ಸಭೆಯಲ್ಲಿ ತಮ್ಮ ವಾದವನ್ನು ಮಂಡಿಸಿದವು. ಭಾರತೀಯ ಕುಸ್ತಿ ಫೆಡರೇಶನ್ ರಾಜ್ಯ ಫೇಡರೇಶನ್ಗಳ ಸದಸ್ಯತ್ವವನ್ನು ರದ್ದು ಮಾಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ರಾಜ್ಯ ಫೆಡರೇಶನ್ಗಳಿಗೆ ಮತದಾನ ಮಾಡಲು ಅವಕಾಶ ನೀಡುವ ಕುರಿತು ಮೂರು ಸದಸ್ಯರನ್ನೊಳಗೊಂಡ ಸಮಿತಿಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗಿದ್ದು ಚುನಾವಣೆಯನ್ನು ಜು.11ಕ್ಕೆ ಮುಂದೂಡಿದೆ ಎಂದು ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿಯಲ್ಲಿ ಬ್ರಿಜ್ ಅಳಿಯನ ಹೆಸರು
ಫೇಡರೇಶನ್ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಕುಟುಂಬಸ್ಥರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕಾರಣದಿಂದಲೂ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಜೂ.7ರಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗಿನ ಸ`ಭೆಯಲ್ಲಿ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳು ಫೆಡರೇಶನ್ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಕುಟುಂಬಸ್ಥರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಬಾರದೆಂದು ಷರತ್ತು ವಿಸಿದ್ದರು.
ಇದೀಗ ಮತದಾರರ ಪಟ್ಟಿಯಲ್ಲಿ ಬ್ರಿಜ್ ಭೂಷಣ್ ಅವರ ಕುಟುಂಬದವರ ಹೆಸರು ಪತ್ತೆಯಾಗಿದೆ. ಈ ಹೆಸರುಗಳನ್ನು ಅಕ್ರಮವಾಗಿ ಸೇರಿಕೊಳ್ಳಲಾಗಿದೆ ಎಂಬ ಆರೋಪ ಗಳು ಕೇಳಿ ಬಂದಿದೆ. ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಅಳಿಯ ವಿಶಾಲ್ ಸಿಂಗ್ ಅವರ ಹಸರು ಮತದಾರರ ಪಟ್ಟಿಯಲ್ಲಿ ಹೆಸರಿದೆ. ವಿಶಾಲ್ ಬಿಹಾರ್ ರೆಸ್ಲಿಂಗ್ ಫೆಡರೇಶನ್ನ ಅಧ್ಯಕ್ಷರಾಗಿದ್ದರು.








