ADVERTISEMENT
Friday, September 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

David Beckham – ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!

admin by admin
July 23, 2026
in Newsbeat, Sports, ಕ್ರೀಡೆ
The King of Branding: How David Beckham Built an Empire Beyond Football!

The King of Branding: How David Beckham Built an Empire Beyond Football!

Share on FacebookShare on TwitterShare on WhatsappShare on Telegram

 ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..! 

ಆತ ಫುಟ್‍ಬಾಲ್ ಮೈದಾನದಲ್ಲಿ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ. ಕಾಲಿನ ಸ್ಪರ್ಶದಿಂದಲೇ ಚೆಂಡನ್ನು ಬಳಕುವ ಬೆಡಗಿಯಂತೆ ಗೋಲು ಬಲೆಯೊಳಗೆ ಬೀಳಿಸುತ್ತಿದ್ದ ಜಾದುಗಾರ. ಸ್ಟೈಲ್ ಲುಕ್‍ನಿಂದಲೇ ಜಾಹೀರಾತು ಲೋಕವನ್ನ ಕಂಪನಗೊಳಿಸುತ್ತಿರುವ ಮೋಡಿಗಾರ. ತನ್ನ ಹೆಸರಿನಲ್ಲೇ ಸಾಮ್ರಾಜ್ಯ ಕಟ್ಟಿದ್ದ ಅಪ್ರತಿಮ ಫುಟ್‍ಬಾಲ್ ಆಟಗಾರ. 8500 ಕೋಟಿಯ ಸರದಾರ..!

Related posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

September 18, 2026
ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

September 18, 2026

ಆತನ ಹೆಸರು -ಡೇವಿಡ್ ಬೆಕ್‍ಹ್ಯಾಮ್..!

ಇದು ಬರೀ ಒಬ್ಬ ಫುಟ್‍ಬಾಲ್ ಆಟಗಾರನ ಹೆಸರಲ್ಲ. ಜಾಗತಿಕ ಮಾರುಕಟ್ಟೆಯ ರಾಯಲ್ ಬ್ರ್ಯಾಂಡ್. ವೃತ್ತಿ ಬದುಕಿಗೆ ವಿದಾಯ ಹೇಳಿ 13 ವರ್ಷವಾದ್ರೂ, ಬೆಕ್‍ಹ್ಯಾಮ್ ಎಂಬ ನೇಮ್ – ಫೇಮ್ ಇಂದಿಗೂ ಪ್ರಖರ ಸೂರ್ಯನಂತೆ ಕಂಗೊಳಿಸುತ್ತಿದೆ.

ಸುಮಾರು 21 ವರ್ಷ ಅಂಗಣದಲ್ಲಿ ತನ್ನ ಅದ್ಭುತ ಆಟದಿಂದಲೇ ಸದ್ದು ಮಾಡಿ ಸುದ್ದಿಯಾಗುತ್ತಿದ್ದ. ಇದೀಗ ಮೈದಾನದಿಂದ ದೂರವಾಗಿದ್ದಾನೆ. ಆದ್ರೂ ಬ್ರ್ಯಾಂಡ್ ಮೌಲ್ಯವನ್ನು ಕಳೆದುಕೊಳ್ಳದ 51ರ ಹರೆಯದ ಜಂಟಲ್ ಮ್ಯಾನ್. ತನ್ನ ಹೆಸರು ಮತ್ತು ವರ್ಚಸ್ಸಿನಿಂದಲೇ ಕೋಟಿ ಕೋಟಿ ಸಂಪಾದನೆ ಮಾಡುವ ಕುಬೇರ. David Beckham 2026 World Cup earnings

ಹೌದು, ಡೇವಿಡ್ ಬೆಕ್ ಹ್ಯಾಮ್, 2026ರ ಫಿಫಾ ವಿಶ್ವಕಪ್‍ನಲ್ಲೂ ಸಂಚಲನ ಸೃಷ್ಟಿಸಿದ್ದಾನೆ. ಅಷ್ಟಕ್ಕೂ , ಬೆಕ್ ಹ್ಯಾಮ್ ಯಾವುದೇ ತಂಡದ ಕೋಚ್ ಅಲ್ಲ. ಮ್ಯಾನೇಜರ್ ಅಲ್ಲ. ಟೂರ್ನಿಯ ಅಧಿಕೃತ ರಾಯಭಾರಿಯೂ ಅಲ್ಲ. ಒಬ್ಬ ಮಾಜಿ ಆಟಗಾರ ಅಷ್ಟೇ. ಹಾಗಾಗಿಯೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡು ಪಂದ್ಯ ನೋಡುತ್ತಾ ಎಂಜಾಯ್ ಮಾಡ್ತಾ ಇದ್ದ. ಸೂಟ್ ಬೂಟ್ ಹಾಕೊಂಡು ಸ್ಟೈಲೀಶ್ ಆಗಿ ಕಾಣಿಸಿಕೊಳ್ಳುತ್ತಿದ್ದ. ಆದ್ರೂ ಫಿಫಾ ವಿಶ್ವಕಪ್‍ನಲ್ಲಿ ಅಷ್ಟೊಂದು ದುಡ್ಡು ಸಂಪಾದನೆ ಮಾಡಿದ್ದು ಹೇಗೆ..?

ಉತ್ತರ ತುಂಬಾನೇ ಸಿಂಪಲ್ ಆಗಿದೆ. 39 ದಿನಗಳಲ್ಲಿ ಆತ ಸಂಪಾದಿಸಿದ್ದ ದುಡ್ಡಿನ ಮೊತ್ತವೇ ಇವತ್ತು ಕ್ರೀಡಾ ಜಗತ್ತಿನ ಸೆನ್ಸೆಷನಲ್ ನ್ಯೂಸ್. ಅದು ಬರೋಬ್ಬರಿ 247 ಕೋಟಿ ರೂ. ಪ್ರತಿಷ್ಠಿತ ಟೂರ್ನಿಯ ವೇಳೆ ವಿವಿಧ ಕಂಪೆನಿಗಳ ಪ್ರಚಾರದ ರಾಯಭಾರಿಯಾಗಿ ಬೆಕ್‍ಹ್ಯಾಮ್ ತನ್ನ ಜೇಬನ್ನು ತುಂಬಿಸಿಕೊಂಡಿದ್ದಾನೆ. ಅಚ್ಚರಿ ಅಂದ್ರೆ ಇಂಗ್ಲೆಂಡ್‍ನ ಆಟಗಾರರಿಗೆ ಈ ಟೂರ್ನಿಯಲ್ಲಿ ಸಿಕ್ಕಿದ್ದು 11 ಮಿಲಿಯನ್ ಪೌಂಡ್. ಅದೇ ಇಂಗ್ಲೆಂಡ್ ತಂಡದ ಮಾಜಿ ಆಟಗಾರನ ಗಳಿಕೆ 19 ಮಿಲಿಯನ್ ಪೌಂಡ್.

ಬೆಕ್‍ಹ್ಯಾಮ್ ಜಾಹೀರಾತು ಲೋಕದ ಕಣ್ಮನಿಯಾಗಿದ್ದು ಹೇಗೆ..?  

ಸಾಮಾನ್ಯವಾಗಿ ಆಟಗಾರರು ಆಡುವ ಟೈಮ್‍ನಲ್ಲಿ ಮಾತ್ರ ಜನಪ್ರಿಯತೆಯ ಉತ್ತುಂಗದಲ್ಲಿರುತ್ತಾರೆ. ನಿವೃತ್ತಿಯ ನಂತರ ತೆರೆಮರೆಗೆ ಸರಿಯುತ್ತಾರೆ. ಆದ್ರೆ ಬೆಕ್‍ಹ್ಯಾಮ್ ಹಾಗಲ್ಲ. ಆಟಗಾರನಾಗಿದ್ದಾಗ ಎಷ್ಟು ಖ್ಯಾತಿ ಪಡೆದಿದ್ದನೋ ಅಷ್ಟೇ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡಿದ್ದಾನೆ. ಇದಕ್ಕೆ ಕಾರಣ ಫುಟ್‍ಬಾಲ್ ಆಟದ ಮೇಲಿನ ಪ್ರೀತಿ ಮತ್ತು ಫ್ಯಾಷನ್ ಮೇಲಿರುವ ಅಭಿರುಚಿ.

ಡೆವಿಡ್ ಬೆಕ್‍ಹ್ಯಾಮ್ ತನ್ನ ವೃತ್ತಿ ಬದುಕು ಮತ್ತು ಸಾರ್ವಜನಿಕ ಬದುಕಿನಲ್ಲಿ ಕ್ಲೀನ್ ಇಮೇಜನ್ನು ಇಟ್ಟುಕೊಂಡಿದ್ದಾನೆ. ಯಾವುದೇ ವಿವಾದ – ಆರೋಪಗಳಿಗೆ ಗುರಿಯಾಗದಂತೆ ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದಾನೆ. ಬದುಕಿನಲ್ಲಿ ಶಿಸ್ತನ್ನು ಕಾಯ್ದುಕೊಂಡಿದ್ದಾನೆ. ತನ್ನನ್ನು ನಂಬಿ ಬಂಡವಾಳ ಹಾಕುವ ಕಂಪೆನಿಗಳ ನಂಬಿಕೆ – ವಿಶ್ವಾಸವನ್ನು ಉಳಿಸಿಕೊಂಡಿದ್ದಾನೆ. ಕಾಲಕ್ಕೆ ತಕ್ಕಂತೆ ತನ್ನಲ್ಲೂ ಬದಲಾವಣೆ ಮಾಡಿಕೊಂಡಿದ್ದಾನೆ. ಅದ್ಭುತ ಲುಕ್, ಹೇರ್ ಸ್ಟೈಲ್ ಹಾಗೂ ಡ್ರೆಸ್ಸಿಂಗ್ ಸೆನ್ಸ್ ನಿಂದಲೇ ಜಾಗತಿಕ ಐಕಾನ್ ಆಗಿ ರೂಪುಗೊಂಡಿದ್ದಾನೆ.

ಯವ್ವನದಲ್ಲಿ ಸೂಪರ್ ಸ್ಟಾರ್ ಆಟಗಾರನಾಗಿ, ಬೆಂಡ್ ಇಟ್ ಲೈಕ್ ಬೆಕ್‍ಹ್ಯಾಮ್ ಎಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದಾನೆ. ನಿವೃತ್ತಿಯ ನಂತರವೂ ಕಂಪೆನಿಗಳ ಸ್ಟಾರ್ ಪ್ರಚಾರಕನಾಗಿದ್ದಾನೆ. ಉದ್ಯಮಿಯಾಗಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದಾನೆ.
ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಆದರ್ಶ ಯಜಮಾನನಾಗಿದ್ದಾನೆ. ಸಮಾಜಮುಖಿ ಕೆಲಸ ಹಾಗೂ ವಿಚಿತ್ರ ಹವ್ಯಾಸಗಳಿಂದಲೂ ಸುದ್ದಿಯಾಗುತ್ತಿದ್ದಾನೆ. ಎಲ್ಲಾ ವಯಸ್ಸಿನ ಗ್ರಾಹಕರನ್ನು ಸೆಳೆಯುವಂತಹ ತೇಜಸ್ಸು ಅನ್ನು ವೃದ್ಧಿಸಿಕೊಂಡಿದ್ದಾನೆ. ಹೀಗಾಗಿಯೇ ಜಾಹೀರಾತು ಲೋಕಕ್ಕೆ ಪ್ರೀತಿ ಪಾತ್ರನಾಗಿದ್ದಾನೆ.

ಗಾಳಿಯಲ್ಲಿ ಅರ್ಧಚಂದ್ರಕಾರದ ವೃತ್ತ ತೋರಿಸುವ ಮಾಂತ್ರಿಕ..!

ಮೇ 2, 1975. ಬೆಕ್‍ಹ್ಯಾಮ್ ಡೇಟ್ ಆಫ್ ಬರ್ತ್. ತಂದೆ ಡೇವಿಡ್ ಎಡ್ವರ್ಡ್ ಆಲನ್ ಟೆಡ್ ಬೆಕ್‍ಹ್ಯಾಮ್. ತಾಯಿ ಸಾಂಡ್ರಾ ಜಾರ್ಜಿನಾ. ಮಧ್ಯಮ ವರ್ಗದ ಕುಟುಂಬ. ಎಳವೆಯಲ್ಲೇ ಬೆಕ್‍ಹ್ಯಾಮ್‍ಗೆ ಫುಟ್‍ಬಾಲ್ ಮೇಲೆ ಆಸಕ್ತಿ. ಪ್ರತಿ ದಿನ ಪಾರ್ಕ್‍ನಲ್ಲಿ ಚೆಂಡಿನ ಜೊತೆ ಕರಸತ್ತು ನಡೆಸುತ್ತಿದ್ದ. ಬಳಿಕ ಸ್ಥಳೀಯ ರಿಡ್ಜ್ ವೇ ರೋವರ್ಸ್ ಕ್ಲಬ್ ಅನ್ನು ಸೇರಿಕೊಂಡಿದ್ದ.

ತನ್ನ 16ನೇ ವಯಸ್ಸಿನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಆಯ್ಕೆಯಾಗಿದ್ದ. ನಂತರ ಹಿಂತಿರುಗಿ ನೋಡಲೇ ಇಲ್ಲ. 12 ವರ್ಷಗಳ ಕಾಲ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಆಡಿದ್ದಾನೆ. ಅಮೋಘ ಆಟವನ್ನಾಡಿ ತಂಡವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದಾನೆ. ಹಲವು ಪ್ರತಿಷ್ಠಿತ ಪಂದ್ಯಗಳನ್ನು ಗೆದ್ದು ಕಿರೀಟ ಕೂಡ ತೊಡಿಸಿದ್ದಾನೆ.

ಬಳಿಕ 2003ರಿಂದ 2007ರ ತನಕ ರಿಯಲ್ ಮ್ಯಾಡಿಡ್ ತಂಡದ ಸ್ಟಾರ್ ಆಟಗಾರನಾದ. ಅಲ್ಲಿ ಜಿನೆದಿನ್ ಜಿದಾನ್, ರೋನಾಲ್ಡೊ, ಫಿಗೋನಂತಹ ಸೂಪರ್ ಸ್ಟಾರ್ ಆಟಗಾರರ ಜೊತೆಗಾರನಾದ. ನಂತರ ಅಮೆರಿಕಾ ಮತ್ತು ಯೂರೋಪ್‍ನಲ್ಲೂ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ.

ಅಮೆರಿಕಾದ ಲಾ ಗ್ಯಾಲಕ್ಸಿ ಪರ ಆಡುವ ಮೂಲಕ ಅಮೆರಿಕಾದ ಫುಟ್‍ಬಾಲ್ ರಂಗಕ್ಕೆ ಹೊಸ ಮೆರುಗನ್ನು ನೀಡಿದ್ದ. ಈ ನಡುವೆ, ಇಟಲಿಯ ಎಸಿ ಮಿಲನ್ ತಂಡದ ಪರವಾಗಿಯೂ ಆಡಿದ್ದ. ಹಾಗೇ ವೃತ್ತಿ ಜೀವನದ ಕೊನೆಯ ಹಂತದಲ್ಲಿ 2013ರಲ್ಲಿ ಫ್ರಾನ್ಸ್‍ನ ಪಿಎಸ್‍ಜಿ ತಂಡದಲ್ಲೂ ಕಾಣಿಸಿಕೊಂಡಿದ್ದ. ಹೀಗೆ 2013ರಲ್ಲಿ ತನ್ನ 21 ವರ್ಷಗಳ ವರ್ಣರಂಜಿತ ಫುಟ್‍ಬಾಲ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದ.

ಕನಸಾಗಿಯೇ ಉಳಿದ ಫಿಫಾ ವಿಶ್ವಕಪ್ ಟ್ರೋಫಿ..!

ಇನ್ನು ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ರೂ ಫಿಫಾ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‍ನ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಕ್‍ಹ್ಯಾಮ್, 1998ರಲ್ಲಿ ಅರ್ಜೆಂಟಿನಾ ವಿರುದ್ದ ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದಿದ್ದ. ಆಗ ಇಂಗ್ಲೀಷ್ ಅಭಿಮಾನಿಗಳು ಈತನ ವಿರುದ್ಧ ತಿರುಗಿಬಿದ್ದಿದ್ದರು.

ಆದ್ರೆ 2001ರಲ್ಲಿ ಗ್ರಿಸ್ ವಿರುದ್ದ ಅದ್ಭುತ ಗೋಲು ಹೊಡೆದು ತಂಡವನ್ನು 2002ರ ಫಿಫಾ ವಿಶ್ವಕಪ್‍ನಲ್ಲಿ ಆಡುವಂತೆ ಮಾಡಿದ್ದ. ಹಾಗೇ ಇಂಗ್ಲೆಂಡ್ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದ. 1998, 2002 ಮತ್ತು 2006ರ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದ. ಮೂರು ಫಿಫಾ ಟೂರ್ನಿಗಳಲ್ಲೂ ತಲಾ ಒಂದೊಂದು ಗೋಲು ದಾಖಲಿಸಿದ್ದ. ಈ ಮೂಲಕ ಅಪರೂಪದ ದಾಖಲೆಯನ್ನು ಬರೆದಿದ್ದ.

ಬೆಂಡ್ ಇಟ್ ಲೈಕ್ ಬೆಕ್‍ಹ್ಯಾಮ್..!

ಪ್ರತಿ ಪಂದ್ಯಕ್ಕೂ ಅಡಿಡಾಸ್ ಕಂಪೆನಿಯ ಪ್ರಿಡೇಟರ್ ಬ್ರ್ಯಾಂಡ್‍ನ ಹೊಸ ಬೂಟ್‍ಗಳನ್ನೇ ಹಾಕಿಕೊಳ್ಳುತ್ತಿದ್ದ. ಫ್ರಿ ಕಿಕ್‍ನಲ್ಲಿ ಗೋಲು ಹೊಡೆಯುವ ಶೈಲಿಯಂತೂ ಕಣ್ಮನ ಸೆಳೆಯುತ್ತದೆ. ಕಾಲಿನಿಂದ ಒದ್ದ ಚೆಂಡು, ವೈಯಾರದ ಬೆಡಗಿಯಂತೆ ಗೋಲು ಬಲೆಯೊಳಗೆ ಬೀಳುವ ಅಂದಕ್ಕೆ ಎದುರಾಳಿ ಗೋಲು ಕೀಪರ್ ಕೂಡ ಮೂಕ ಪ್ರೇಕ್ಷಕನಾಗುತ್ತಾನೆ.

ಬೆಕ್‍ಹ್ಯಾಮ್‍ನ ಫ್ರಿಕಿಕ್ ಶೈಲಿಯ ಕಿಕ್‍ಗೆ ಮಾರುಹೋದ ಅಭಿಮಾನಿಗಳು ಪ್ರೀತಿಯಿಂದ ಬೆಂಡ್ ಇಟ್ ಲೈಕ್ ಬೆಕ್‍ಹ್ಯಾಮ್ ಅಂತ ಕರೆಯುತ್ತಿದ್ದರು. ಇದೇ ಹೆಸರು ಮುಂದೆ ಹಾಲಿವುಡ್‍ನ ಒಂದು ಸಿನಿಮಾದ ಟೈಟಲ್ ಕೂಡ ಆಗಿದೆ.

ಫುಟ್‍ಬಾಲ್ ಆಟಗಾರನ ಬಿಲಿಯೇನೆರ್ ಸಾಮ್ರಾಜ್ಯ..!

ಫುಟ್‍ಬಾಲ್ ಆಟದಿಂದ ನಿವೃತ್ತಿಯಾದ ನಂತರ ಬೆಕ್‍ಹ್ಯಾಮ್ ಸುಮ್ಮನೆ ಕೂರಲಿಲ್ಲ. ತನ್ನ ಹೆಸರಿನ ವರ್ಚಸ್ಸನ್ನೇ ಜಾಗತಿಕ ಮಟ್ಟದಲ್ಲಿ ಗುರುತಿಸುಕೊಳ್ಳುವಂತೆ ಮಾಡಿದ್ದಾನೆ. ಅಮೆರಿಕಾದ ಇಂಟರ್ ಮಿಯಾಮಿ ಕ್ಲಬ್‍ನ ಪಾಲುದಾರನಾಗಿದ್ದಾನೆ.. 2026ರಲ್ಲಿ ಲಿಯೋನೆಲ್ ಮೆಸ್ಸಿಯನ್ನು ತನ್ನ ಕ್ಲಬ್‍ಗೆ ಸೇರಿಸಿಕೊಂಡಿದ್ದಾನೆ. ಈ ಮೂಲಕ ಅಮೆರಿಕಾ ಫುಟ್‍ಬಾಲ್‍ನ ಚರಿಷ್ಮಾವನ್ನೇ ಬದಲಾಯಿಸಿದ್ದಾನೆ. ಹಾಗೇ ಅಮೆರಿಕಾದಲ್ಲೂ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾನೆ. Inter Miami Lionel Messi Beckham

ಡಿಬಿ ವೆಂಚರ್ಸ್‍ನ ಕುಬೇರ

ಇದು ಬೆಕ್‍ಹ್ಯಾಮ್‍ನ ಪ್ರಮುಖ ಹೂಡಿಕೆ ಮತ್ತು ಬ್ರ್ಯಾಂಡ್ ಮ್ಯಾನೇಜ್‍ಮೆಂಟ್ ಕಂಪೆನಿ. ಬೆಕ್‍ಹ್ಯಾಮ್ ನ ಜಾಗತಿಕ ಬ್ರ್ಯಾಂಡ್ ಪ್ರಚಾರಗಳು ಮತ್ತು ಎಲ್ಲಾ ವ್ಯವಹಾರಗಳನ್ನು ಈ ಕಂಪೆನಿಯೇ ನಿರ್ವಸುತ್ತಿದೆ. ಫ್ಯಾಷನ್, ಫುಡ್, ಲೈಫ್ ಸ್ಟೈಲ್, ಸ್ಪೋಟ್ರ್ಸ್ ಪರಿಕರಗಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಬ್ರ್ಯಾಂಡ್‍ಗಳಿಗೆ ಜಾಗತಿಕ ರಾಯಭಾರಿಯಾಗಿದ್ದಾನೆ. ಅದರಲ್ಲೂ ಅಡಿಡಾಸ್ ಕಂಪೆನಿಯ ಜೊತೆ ಆಜೀವ ಒಪ್ಪಂದಕ್ಕೂ ಸಹಿ ಮಾಡಿಕೊಂಡಿದ್ದಾನೆ. Brand Beckham net worth,

ಸ್ಟುಡಿಯೋ 99 ಪ್ರೋಡಕ್ಷನ್ ಹೌಸ್..!
2019ರಲ್ಲಿ ಸ್ಟುಡಿಯೋ 99 ಮೀಡಿಯಾ ಮತ್ತು ಪ್ರೋಡಕ್ಷನ್ ಹೌಸ್ ಕಂಪೆನಿಯನ್ನು ಶುರು ಮಾಡಿದ್ದನು. ಡಾಕ್ಯುಮೆಂಟರಿ, ಜಾಹಿರಾತು ಚಿತ್ರೀಕರಣ, ಸಿನಿಮಾ, ಟಿವಿ ಶೋಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಹಿಟ್ ಆಗಿರುವ ಬೆಕ್‍ಹ್ಯಾಮ್ ವೆಎಬ್ ಸಿರೀಸ್ ಅನ್ನು ನಿರ್ಮಿಸಿದ್ದು ಕೂಡ ಇದೇ ಸಂಸ್ಥೆ.

ಇನ್ನು ಸಲ್ಪರ್ 88 ಕಂಪೆನಿಯ ಮೂಲಕ ಇ- ಸ್ಪೋಟ್ರ್ಸ್ ಹಾಗೂ ವಿಡಿಯೋ ಗೇಮಿಂಗ್ ಲೋಕದಲ್ಲೂ ಹೂಡಿಕೆ ಮಾಡಿದ್ದಾನೆ. ತನ್ನ ಪತ್ನಿ ವಿಕ್ಟೋರಿಯಾ ಒಡೆತನದ ವಿಕ್ಟೋರಿಯಾ ಬೆಕ್‍ಹ್ಯಾಮ್ ಬ್ಯೂಟಿ ಎಂಬ ಫ್ಯಾಷನ್ ಕಂಪೆನಿಯ ಸಹಮಾಲೀಕನಾಗಿದ್ದಾನೆ. ಕೆಲವೊಂದು ಪ್ರತಿಷ್ಠಿತ ಲೈಫ್ ಸ್ಟೈಲ್ ಕಂಪೆನಿಗಳಲ್ಲೂ ಶೇರ್ ಹೋಲ್ಡರ್ ಆಗಿದ್ದಾನೆ.

ಜೇನು ಸಾಕಾಣೆ ಮತ್ತು ಸಾವಯವ ಉದ್ಯಮ..!

ಕೋವಿಡ್ ಸಮಯದಲ್ಲಿ ಬೆಕ್‍ಹ್ಯಾಮ್ ಹವ್ಯಾಸಕ್ಕಾಗಿ ಜೇನುಸಾಕಾಣೆ ಮಾಡಿದ್ದ. ಬಳಿಕ ಅದನ್ನೇ ಉದ್ಯಮವನ್ನಾಗಿಸಿಕೊಂಡಿದ್ದಾನೆ. ಇದೀಗ ಡಿಬಿ ಬೀಝ್ ಎಂಬ ಹೆಸರಿನಲ್ಲಿ ಸಾವಯವ ಜೇನತುಪ್ಪವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾನೆ. ವರ್ಷಕ್ಕೆ 850 ಕೋಟಿ ರೂ. ಸಂಪಾದನೆ ಮಾಡುವ ಬೆಕ್‍ಹ್ಯಾಮ್‍ನ ಒಟ್ಟು ನಿವ್ವಳ ಆಸ್ತಿ ಮೌಲ್ಯ 8500 ಕೋಟಿ ರೂ.

ಶಿಸ್ತಿನ ವ್ಯಕ್ತಿ.. ಆದ್ರೂ ವಿಚಿತ್ರ ಸ್ವಭಾವ..!

ಶಿಸ್ತಿನ ಬದುಕೇ ಬ್ಯಾಕ್‍ಹ್ಯಾಮ್‍ನ ಯಶಸ್ಸಿನ ಗುಟ್ಟು. ಸರಳತೆ ಮತ್ತು ಸಮಯಪಾಲನೆಯೇ ಆತನ ವರ್ಚಸ್ಸಿಗೆ ಪ್ರಮುಖ ಕಾರಣ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಬೆಕ್‍ಹ್ಯಾಮ್, ಮನೆಯಲ್ಲಿ ಮೂರು ಫ್ರಿಡ್ಜ್‍ಗಳನ್ನು ಇಟ್ಟುಕೊಂಡಿದ್ದಾನೆ. ಆಹಾರ ಪದಾರ್ಥ, ತರಕಾರಿ ಮತ್ತು ಪಾನೀಯಗಳಿಗೆ ಪ್ರತ್ಯೇಕ ಫ್ರಿಡ್ಜ್‍ಗಳಿವೆ. ಮನೆಯಲ್ಲಿರುವ ವಸ್ತುಗಳು ಸಮ ಸಂಖ್ಯೆಯಲ್ಲಿರಬೇಕು. ಬೆಸ ಸಂಖ್ಯೆಯಲ್ಲಿದ್ರೆ ಕಿರಿಕಿರಿ ಎಂಬುದು ಆತನ ನಂಬಿಕೆ.

ಇನ್ನು ತನ್ನ ದೇಹದಲ್ಲಿ ಸುಮಾರು 60ಕ್ಕೂ ಹೆಚ್ಚು ಟ್ಯಾಟ್‍ಗಳಿವೆ. ತನಗೆ ಬೇಕಾದವರ ಹೆಸರುಗಳು ಎಲ್ಲವೂ ಮೈಮೇಲಿನ ಹಚ್ಚೆಯಲ್ಲಿವೆ. ಪತ್ನಿಯ ಹೆಸರನ್ನಂತೂ ಸಂಸ್ಕøತದಲ್ಲಿ ಬರೆಸಿಕೊಂಡಿದ್ದಾನೆ. 2022ರಲ್ಲಿ ಬ್ರಿಟನ್ ರಾಣಿ ನಿಧನರಾಗಿದ್ದಾಗ 12 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದ್ದಾನೆ. ಇದು ಆತನ ಸರಳತೆಗೆ ಹಿಡಿದ ಕೈಗನ್ನಡಿ.

ಸ್ಟೈಲೀಶ್ ಪ್ಲೇಯರ್, ಟ್ರೆಂಡ್ ಸೆಟ್ಟರ್.. ಕಿಂಗ್ ಮೇಕರ್…!

ಒಟ್ಟಿನಲ್ಲಿ ಡೇವಿಡ್ ಬೆಕ್‍ಹ್ಯಾಮ್ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆ ಹಾಗೂ ಮಾದರಿ ವ್ಯಕ್ತಿತ್ವ. ತನಗೆ ಬಂದಿರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ವ್ಯಕ್ತಿತ್ವದ ವರ್ಚಸ್ಸನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದಕ್ಕೆ ಬೆಕ್‍ಹ್ಯಾಮ್ ಬದುಕಿನ ಚಿತ್ರಣವೇ ಸಾಕ್ಷಿ.

ಒಂದಂತೂ ಸತ್ಯ.. ಬೆಕ್‍ಹ್ಯಾಮ್, ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕವನ್ನು ಕೈ ಬೆರಳಿನಲ್ಲಿ ಆಡಿಸುವ ಕಿಂಗ್‍ಮೇಕರ್..! ನೀವು ಏನಂತೀರಿ..?

ಸನತ್ ರೈ

 

ShareTweetSendShare
Join us on:

Related Posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

by Shwetha
September 18, 2026
0

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದಿಂದ ದೂರವಾಗಿರುವ ಬಂಡಾಯ ನಾಯಕರನ್ನು ಮತ್ತೆ ಮನೆಗೆ ಕರೆತರುವುದು ಅನಿವಾರ್ಯ ಎಂದು ಮಾಜಿ ಸಚಿವ ಮುರುಗೇಶ...

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

by Shwetha
September 18, 2026
0

ರಷ್ಯಾದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ...

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

by Shwetha
September 18, 2026
0

ಮೈಸೂರು: ಟಿ ನರಸೀಪುರದ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ನಡೆ ಈಗ ಇಡೀ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ತಾವು ನೀಡಿದ್ದ ವಿವಾದಾತ್ಮಕ...

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYC ಗಡುವು ವಿಸ್ತರಣೆ: ಅಕ್ಟೋಬರ್ 20ರವರೆಗೆ ಅವಕಾಶ, ನ್ಯಾಯಬೆಲೆ ಅಂಗಡಿ ಸಮಯವೂ ಬದಲಾವಣೆ

by Shwetha
September 18, 2026
0

ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗಳ e-KYC ಪೂರ್ಣಗೊಳಿಸಲು ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವನ್ನು...

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

by Shwetha
September 18, 2026
0

ಬೆಂಗಳೂರು: ರಾಜಕೀಯ ಅಖಾಡದಲ್ಲಿ ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದ ಸಿದ್ದರಾಮಯ್ಯನವರು ಇಂದು ಅತ್ಯಂತ ಭಾವುಕವಾಗಿ ಮತ್ತು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಈಗ ಎಷ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram