ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಚಿತ್ರನಟ ಮಾಸ್ಟರ್ ಆನಂದ್ ಗೆ ವಂಚನೆಯಾಗಿರುವ ಕುರಿತು ದೂರು ದಾಖಲಾಗಿದೆ.
ಮಲ್ಟಿ ಲೀಪ್ ವೆಂಚರ್ಸ್ ಎಂಬ ಕಂಪನಿಯು ನಿವೇಶನ ನೀಡುವುದಾಗಿ ನಂಬಿಸಿ 18.50 ಲಕ್ಷ ರೂ. ವಂಚನೆ ಮಾಡಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಕಂಪನಿಯು 2020ರಲ್ಲಿ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದದಲ್ಲಿ ನಿವೇಶನನ್ನು ಮಾಸ್ಟರ್ ಆನಂದ್ ನೋಡಿದ್ದರು. ಈ ಸಂದರ್ಭದಲ್ಲಿ ಸಾಲ ಸೌಲಭ್ಯ ಕೂಡ ಇದೆ ಎಂದು ಕಂಪನಿ ಹೇಳಿದ್ದರು. ಆನಂತರ 2 ಸಾವಿರ ಚದರ್ ಅಡಿ ವಿಸ್ತೀರ್ಣದ ನಿವೇಶನವನ್ನು 70 ಲಕ್ಷ ರೂ.ಗೆ ಖರೀದಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಹೀಗಾಗಿ ಮುಂಗಡವಾಗಿ ಮಾಸ್ಟರ್ ಆನಂದ್ 18.5 ಲಕ್ಷ ರೂ. ಹಣವನ್ನು ಕಂಪನಿಗೆ ನೀಡಿದ್ದರು. ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಖರಾರು ಪತ್ರವನ್ನು ಕಂಪನಿ ಮಾಡಿಕೊಟ್ಟಿತ್ತು. ಆದರೆ, ಇತ್ತೀಚೆಗೆ ಈ ನಿವೇಶನವನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿರುವ ವಿಷಯ ಗೊತ್ತಾಗಿ ಹಣ ಕೇಳಿದ್ದಾರೆ. ಇದಕ್ಕೆ ಕಂಪನಿ ಸ್ಪಂದಿಸದ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ್ದಾರೆ.








