ಸರ್ಫರಾಜ್ ಕಾನ್ ಫಿಟ್ನೆಸ್ ಬಗ್ಗೆ ಐಸಿಸಿಯ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. ಸರ್ಫರಾಜ್ ಖಾನ್ ತಮ್ಮ ಫಿಟ್ ನೆಸ್ ಉತ್ತಮಪಡಿಸಿಕೊಳ್ಳಬೇಕು ಹಾಗೂ ಮೈದಾನದಾಚೆಯ ನಡುವಳಿಕೆಯಲ್ಲಿ ಸುಧಾರಿಸಬೇಕು. ಹೀಗಾದರೆ ಮಾತ್ರ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡದಿರುವು ಕುರಿತು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ರಣಜಿ ಟ್ರೋಫಿ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿ ರನ್ ಗಳಿಸಿದ್ದ ಸರ್ಫರಾಜ್ ಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿ, ಆಯ್ಕೆಯಾಗದಿರುವ ಕುರಿತು ಬರುತ್ತಿರುವ ಹೇಳಿಕೆಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಸರ್ಫರಾಜ್ ಅವರನ್ನು ಪರಿಗಣಿಸದಿರುವು ಹಿಂದೆ ಕೆಲವು ಕಾರಣಗಳಿವೆ. ಆದರೆ, ಅವರ ಕ್ರಿಕೆಟ್ ಸಾಧನೆ ಬಗ್ಗೆ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.
ರಣಜಿ ಋತುಗಳಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿರುವ ಅವರನ್ನು ಆಯ್ಕೆ ಮಾಡದದಿರುವ ಆಯ್ಕೆಗಾರರೇನು ಮುರ್ಖರಲ್ಲ. ಇದರ ಹಿಂದೆ ಬಲವಾದ ಕಾರಣಗಳಿರಬೇಕಲ್ಲವೇ? ಮುಖ್ಯವಾಗಿ ಅವರ ಫಿಟ್ ನೆಸ್ ಅಂತಾರಾಷ್ಟ್ರೀಯ ದರ್ಜೆಗೆ ಸರಿ ಹೊಂದುವಂತದಲ್ಲ. ಅದಕ್ಕಾಗಿ ಅವರು ಬಹಳಷ್ಟು ಕಠಿಣ ಪ್ರಯತ್ನ ಮಾಡಬೇಕಿದೆ. ದೇಹ ತೂಕ ಇಳಿಸಿಕೊಳ್ಳುವುದು ಮುಖ್ಯವಾಗಿದೆ. ಕೇವಲ ಬ್ಯಾಟಿಂಗ್ ಮಾತ್ರ, ಉಳಿದ ವಿಭಾಗಗಳಲ್ಲಿಯೂ ಸಮರ್ಥರಾಗಿ ಆಡಬೇಕು ಎಂದು ಹೇಳಿದ್ದಾರೆ.








