ನವದೆಹಲಿ: ಲಡಾಕ್‍ನ ಗಾಲ್ವನ್ ಕಣಿವೆಯ ಇಂಡೋ-ಚೀನಾ ಗಡಿಯಲ್ಲಿ ನಡೆದ ಘರ್ಷಣೆ ವಿಚಾರವಾಗಿ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ವಪಕ್ಷಗಳ ನಾಯಕರ ಸಭೆ ಕರೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖಾಮುಖಿಯಾಗಲಿದ್ದಾರೆ.
ಸಂಜೆ 5 ಗಂಟೆಗೆ ನಡೆಯಲಿರುವ ಸರ್ವಪಕ್ಷಗಳ ಸಭೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ 20 ಪಕ್ಷಗಳ ನಾಯಕರು ನಾಯಕರು ಪಾಲ್ಗೊಳ್ಳಲಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ.
ಐದು ದಶಕಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಯೋಧರನ್ನು ಭಾರತ ಕಳೆದುಕೊಂಡಿದೆ. ಹೀಗಾಗಿ ಮೋದಿ ಅವರು ಗಡಿ ಉದ್ವಿಘ್ನತೆ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟತೆ ನೀಡಬೇಕೆಂದು ಎಂದು ಸೋನಿಯಾಗಾಂಧಿ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ನಾಯಕರ ಜತೆ ಸಭೆ ನಡೆಸಲು ಪ್ರಧಾನಿ ನಿರ್ಧರಿಸಿದ್ದರು.
ಲಾಕ್‍ಡೌನ್ ವೇಳೆ ಪ್ರಧಾನಿ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಸೋನಿಯಾಗಾಂಧಿ, ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದರು. ಇಂದಿನ ಸಭೆಗೆ ಬಿಜೆಪಿಯಿಂದ ಜೆ.ಪಿ ನಡ್ಡಾ, ಶಿವಸೇನೆಯಿಂದ ಉದ್ಧವ್ ಠಾಕ್ರೆ, ಡಿಎಂಕೆಯಿಂದ ಎಂ.ಕೆ ಸ್ಟ್ಯಾಲಿನ್, ಎಐಎಡಿಎಂಯಿಂದ ಪಳನಿಸ್ವಾಮಿ, ಪನ್ನೀರ್‍ಸೆಲ್ವಂ, ಟಿಡಿಪಿಯಿಂದ ಚಂದ್ರಬಾಬು ನಾಯ್ಡು, ಜಗಮೋಹನರೆಡ್ಡಿ, ಶರದ್ ಪವಾರ್, ನಿತಿಶ್ ಕುಮಾರ್, ಅಖಿಲೇಶ್ ಯಾದವ್, ಡಿ ರಾಜಾ, ಸೀತಾರಾಮ ಎಚೂರಿ, ಕೆ. ಚಂದ್ರಶೇಖರರಾವ್, ಸುಖ್‍ಬೀರ್ ಬಾದಲ್, ಚಿರಾಗ್ ಪಾಸ್ವಾನ್, ಹೇಮಂತ್ ಸೊರೇನ್ ಪಾಲ್ಗೊಳ್ಳಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ 20 ಪಕ್ಷಗಳ ಮುಖಂಡರ ಜತೆ ಮುಖಾಮುಖಿಯಾಗದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ರೂಮ್ ನಂ 418 ಪ್ರವೇಶಿಸಲು ಧೈರ್ಯವಿದೆಯೇ?: ಪ್ರಶಾಂತ್ ನೀಲ್ ಅರ್ಪಿಸುವ, ಮೈತ್ರಿ ಮೂವಿ ಮೇಕರ್ಸ್‌ನ ‘418’ ಚಿತ್ರದ ಟ್ರೇಲರ್ ಬಿಡುಗಡೆ!
ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’, ಇದೀಗ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದೆ. ಸ್ಟಾರ್ ನಿರ್ದೇಶಕ...








