ಬೆಂಗಳೂರಿನ ಫುಡ್ ಕೋರ್ಟ್ ಒಂದರಲ್ಲಿ ಹೊಟೇಲ್ನ ಟೇಬಲ್ನಲ್ಲಿ ಸತ್ತ ಇಲಿಯೇ ಸಿಕ್ಕಿದ್ದು, ಜನರು ಹೌಹಾರುವಂತೆ ಮಾಡಿದೆ.
ಬೆಂಗಳೂರಿನ ಜನಪ್ರಿಯ ಪೀಠೋಪಕರಣ ಸ್ಟೋರ್ ಐಕಿಯಾಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಇಲ್ಲಿನ ಫುಡ್ ಕೋರ್ಟ್ನಲ್ಲಿ ಊಟ ಆನಂದಿಸುತ್ತಿದ್ದಾಗ ಸೀಲಿಂಗ್ನಿಂದ ಇಲಿಯು ಟೇಬಲ್ ಮೇಲೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ.
ಮೇಜಿನ ಮೇಲೆ ಸತ್ತ ಇಲಿಯನ್ನು ತಮ್ಮ ತಿಂಡಿಗಳೊಂದಿಗೆ ತೋರಿಸಿದ್ದಾರೆ. ನಮ್ಮ ಆಹಾರದ ಮೇಜಿನ ಮೇಲೆ ಏನಾಯಿತು ಎಂದು ಊಹಿಸಿ, ನನಗೆ ಸಾಧ್ಯವಿಲ್ಲ. ನಾವು ತಿನ್ನುತ್ತಿದ್ದೆವು ಮತ್ತು ಈ ಇಲಿ ಈಗಷ್ಟೇ ಸತ್ತು ಬಿದ್ದಿತ್ತು… ಅತ್ಯಂತ ವಿಲಕ್ಷಣ ಕ್ಷಣ’ ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ. ನಾಗಸಂದ್ರದಲ್ಲಿರುವ ಐಕೆಇಎ ಸ್ಟೋರ್ಗೆ ಇಬ್ಬರು ಸ್ನೇಹಿತರು ಮತ್ತು ಒಬ್ಬ ಸ್ನೇಹಿತನ ಮಗನೊಂದಿಗೆ ಹೋಗಿದ್ದರು. ಸ್ನೇಹಿತರೊಬ್ಬರು ಫುಡ್ ಕೋರ್ಟ್ನಿಂದ ಸಿಹಿತಿಂಡಿಗಳನ್ನು ಪಡೆಯಲು ಹೋದಾಗ, ಮಹಿಳೆ ಟೇಬಲ್ ಆರಿಸಿ ಕುಳಿತರು. ಈ ಕ್ಷಣದಲ್ಲಿ ಇಲಿ ಚಾವಣಿಯಿಂದ ಬಿದ್ದಿದ್ದು, ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಲ್ ಆದ ಪೋಸ್ಟ್ಗೆ ನೆಟ್ಟಿರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಜನರು ಬಗೆ ಬಗೆಯ ಪೋಸ್ಟ್ ಗಳನ್ನು ಮಾಡಿದ್ದಾರೆ.