ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಕಿಯಾರ ಅಡ್ವಾನಿಗೆ ನೆಟ್ಟಿಗರು ಸೀರೆ ಉಡಿಸಿದ್ದಾರೆ. ಹಾಗೆ ಯುವತಿಯ ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫರ್ ಗೂ ಸೀರೆ ಉಡಿಸಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಡಬ್ಬೂ ರತ್ನಾನಿ 2020ನೇ ಸಾಲಿನ ಗ್ಲ್ಯಾಮರ್ ಕ್ಯಾಲೆಂಡರ್ ಹೊರತರುತ್ತಿದೆ. ಇದಕ್ಕಾಗಿ ಬಾಲಿವುಡ್ ನಟಿಯರ ಟಾಪ್‍ಲೆಸ್ ಫೋಟೋಶೂಟ್ ಮಾಡುತ್ತಿದ್ದು, ರತ್ನಾನಿ ಭೂಮಿ ಪಡ್ನೇಕರ್, ಕಿಯಾರ ಅಡ್ವಾಣಿ ಹಾಗೂ ಸನ್ನಿ ಲಿಯೋನ್ ಅವರ ಟಾಪ್ ಲೆಸ್ ಫೋಟೋಶೂಟ್ ಮಾಡಿದ್ದಾರೆ. ಈ ನಟ್ಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಈ ಫೋಟೋಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಿಯಾರ ಫೋಟೊಗೆ ಸೀರೆ ಉಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ ಟಾಪ್ ಲೆಸ್ ಫೋಟೋಗೆ ಸೀರೆ ಉಡಿಸಿ ಫೋಟೋಶೂಟ್ ಎಂದರೆ ಹೀಗಿರಬೇಕು ಎಂದಿದ್ದಾರೆ.









