ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ರೋಹಿತ್ ಭಯ್ಯ…! ಚಾಹಲ್ ಟ್ವಿಟ್ ಹಿಂದಿನ ಮ್ಯಾಜಿಕ್ ಏನು ?
ರೋಹಿತ್‍ಗೆ ಮದುವೆಯಾಗಿದೆ. ಮುದ್ದಾದ ಮಗುವಿದೆ. ಆದ್ರೂ ರೋಹಿತ್ ಪಕ್ಕದಲ್ಲಿರುವ ಈ ಹುಡುಗಿ ಯಾರು ? ಟೀಮ್ ಇಂಡಿಯಾ ಆಟಗಾರ ಯುಜುವೇಂದ್ರ ಚಾಹಲ್ ಅವರು, ರೋಹಿತ್ ಪಕ್ಕದಲ್ಲಿ ಈ ಹುಡುಗಿಯ ಫೋಟೋವನ್ನು ಯಾಕೆ ಹಾಕಿದ್ದಾರೆ… ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ.
ಆದ್ರೆ ವಾಸ್ತವ ಸಂಗತಿಯೇ ಬೇರೆ. ಇದು ಯುಜುವೇಂದ್ರ ಚಾಹಲ್ ಅವರ ಕೈಚಕ. ರೋಹಿತ್ ಶರ್ಮಾ ಫೋಟೋವನ್ನು ಹುಡುಗಿಯಾಗಿ ಬದಲಾಯಿಸಿದ್ದಾರೆ. ಅಂದ ಹಾಗೇ ಈ ಮ್ಯಾಜಿಕ್ ಹಿಂದಿದೆ ಆ ಒಂದು ಆಫ್ಲಿಕೇಶನ್. ಆಪ್ಲಿಕೇಶನ್‍ನಲ್ಲಿ ರೋಹಿತ್ ಅವರ ಫೋಟೋ ಹಾಕಿ ಅದನ್ನು ಹುಡುಗಿಯಾಗಿ ಬದಲಾಯಿಸಿದ್ದಾರೆ. ಜೊತೆಗೆ ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ರೋಹಿತ್ ಭಯ್ಯಾ ಅಂತ ಟ್ಯಾಗ್ ಲೈನ್ ಅನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ರೋಹಿತ್ ಮತ್ತು ಯುಜುವೇಂದ್ರ ಚಾಹಲ್ ಅವರು ಸಾಮಾಜಿಕ ಜಾಲ ತಾಣದಲ್ಲಿ ತಮಾಷೆಯಾಗಿ ಕಿತ್ತಾಡಿಕೊಂಡು ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಯುಜುವೇಂದ್ರ ಚಾಹಲ್ ಅವರ ಟ್ವಿಟ್‍ಗೆ ಸಾಕಷ್ಟು ಅಭಿಮಾನಿಗಳು ಕಮೇಂಟ್ ಮಾಡಿದ್ದಾರೆ. ಹಾಗೇ ಟೀಮ್ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಸೇರಿದಂತೆ ಅನೇಕ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್‍ನ ಅಪಾಯಕಾರಿ ಬ್ಯಾಟ್ಸ್ ಮೆನ್ ಕ್ರಿಸ್ ಗೇಲ್ ಚಾಹಲ್‍ಗೆ ನೀನು ತುಂಬಾನೇ ಕಿರಿಕಿರಿಯನ್ನುಂಟು ಮಾಡುವ ವ್ಯಕ್ತಿ ಅಂತ ಲೈವ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
ಇನ್ನು ಯುಜುವೇಂದ್ರ ಚಾಹಲ್ ತುಂಬಾನೇ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿತ್ವ. ಲಾಕ್ ಡೌನ್ ಟೈಮ್ ನಲ್ಲಿ ಚಾಹಲ್ ಟಿಕ್ ಟಾಕ್ ಮೂಲಕವೂ ಸುದ್ದಿಯಾಗಿದ್ದರು. ಈ ನಡುವೆ, ಚಾಹಲ್ ಹಾಸ್ಯ ಪ್ರಜ್ಞೆಗೆ ತಮಾಷೆಯಾಗಿ ರೋಹಿತ್ ಶರ್ಮಾ ಜೊತೆ ಪ್ರತಿಕ್ರಿಯಿಸಿದ್ದ ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಜಾತಿ ನಿಂದನೆ ಆರೋಪಕ್ಕೆ ಸಿಲುಕಿದ್ದ ಯುವಿ ಕೊನೆಗೆ ಕ್ಷಮೆ ಕೇಳಬೇಕಾಯ್ತು.
ಒಟ್ಟಿನಲ್ಲಿ ಲಾಕ್ ಡೌನ್ ನಲ್ಲಿ ಬಿಡುವು ಆಗಿರುವ ಕ್ರಿಕೆಟಿಗರು ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.








