ಬೆಂಗಳೂರು: ಮಹಾಮಾರಿ ಕೋರೊನಾ ವೈರಸ್ ಜಗತ್ತಿನೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಯಾವುದೇ ಪ್ರಯತ್ನ ನಡೆಸಿದರೂ ಯಶಸ್ಸು ಕಾಣುತ್ತಿಲ್ಲ.
ಆದರೆ, ನಮ್ಮ ಪ್ರಾಚೀನ ವೈದ್ಯ ಶಾಸ್ತ್ರಗಳಲ್ಲಿ ಒಂದಾದ ಮರ್ಮ ಚಿಕಿತ್ಸಾ ಪದ್ದತಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ. ಈ ಚಿಕಿತ್ಸೆಯನ್ನು ಹೆಚ್ಚು ಖರ್ಚಿಲ್ಲದೆ ಸುಲಭವಾಗಿ ನಮ್ಮ ಮನೆಗಳಲ್ಲಿಯೇ ಮಾಡಿಕೊಳ್ಳಬಹುದಾಗಿದೆ.
ಯಾವುದೇ ವೈರಸ್ ಅಥವಾ ಬ್ಯಾಕ್ಟಿರಿಯಾಗಳಿಂದ ನಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳಬೇಕು. ಮರ್ಮ ಚಿಕಿತ್ಸೆ ಮೂಲಕ ನಮ್ಮ ದೇಹವನ್ನು ಸದೃಢವಾಗಿ ಹಾಗೂ ಆರೋಗ್ಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗಲಿದೆ.
ಸುಲಭ ಚಿಕಿತ್ಸಾ ವಿಧಾನ
ನಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಮರ್ಮ ಬಿಂದುಗಳು ಇರುತ್ತವೆ. ಆ ಬಿಂದುಗಳ ಮೇಲೆ ಸರಿಯಾದ ಒತ್ತಡವನ್ನು ನೀಡುವುದರ ಮುಖಾಂತರ ಉತ್ತಮ ಫಲಿತಾಂಶ ಪಡೆಯಬಹುದು. ನಮ್ಮಲ್ಲಿ ಪ್ರವಹಿಸುವ ಪ್ರಾಣ ಶಕ್ತಿಯ ಏರಿಳಿತಗಳನ್ನ ಪಡೆದು ಅದರ ಮೂಲಕ ರೋಗವನ್ನು ಹಿಡಿತಕ್ಕೆ ತರಬಹುದು ಎಂದು ಮರ್ಮ ಚಿಕಿತ್ಸೆ ಹೇಳುತ್ತದೆ.
ಮರ್ಮ ಬಿಂದುಗಳ ಮೇಲೆ ಬಣ್ಣಗಳನ್ನು, ಅಯಸ್ಕಾಂತ, ಬೇಳೆ ಕಾಳುಗಳನ್ನು ಬಳಸಿ ಒತ್ತಡ ನೀಡುವ ಮೂಲಕ ಮರ್ಮ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಬಾಲ ವೃದ್ಧರಾದಿಯಾಗಿ ಎಲ್ಲ ತರಹದ ಕಾಯಿಲೆಗಳಿಗೆ ಉತ್ತಮವಾದ, ಸುಲಭವಾದ, ಎಲ್ಲಾ ವರ್ಗದವರಿಗೂ ಅಡ್ಡ ಪರಿಣಾಮವಿಲ್ಲದೆ ನೀಡುವುದೇ ಈ ಚಿಕಿತ್ಸೆಯ ವೈಶಿಷ್ಟ್ಯತೆ.
ಯಾವ ಯಾವ ರೋಗಕ್ಕೆ ಚಿಕಿತ್ಸೆ
ಸದ್ಯ ಕೊರೊನಾ ವೈರಸ್ ಮಹಾಮಾರಿಯಂತೆ ಹಬ್ಬುತ್ತಿದೆ. ಉಸಿರಾಟದ ತೊಂದರೆ, ಕೆಮ್ಮು, ಶೀತ, ನೆಗಡಿ, ಮೂಗು ಕಟ್ಟುವುದು, ಗಂಟಲು ನೋವು ಮಹಾಮಾರಿ ಕೊರೊನಾದ ಪ್ರಮುಖ ಲಕ್ಷಣಗಳು. ಈ ರೋಗ ಲಕ್ಷಣ ಇರುವವರಿಗೆ ಮರ್ಮ ಚಿಕಿತ್ಸೆ ಮೂಲಕ ಸು-ಜೋಕ್ ಮತ್ತು ಬಣ್ಣಗಳ ಬಳಕೆಯಿಂದಲೂ ಚಿಕಿತ್ಸೆ ನೀಡಬಹುದು. ಇದು ಸಾಂಕ್ರಾಮಿಕ ರೋಗಗಳನ್ನ ಗುಣಪಡಿಸಲು ಹಾಗೂ ರೋಗ ನಿರೋಧಕವಾಗಿಯೂ ಕೆಲಸ ಮಾಡಲಿದೆ. ಕೊರೊನಾ ರೋಗದ ನಿರೋಧಕವಾಗಿಯೂ ಈ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಬಹುದು.
ಏನೇನು ಬೇಕು
ಮರ್ಮ ಚಿಕಿತ್ಸೆಯನ್ನು ಸುಮಾರು 6ರಿಂದ 8 ಗಂಟೆಗಳ ಕಾಲ ನೀಡಲಾಗುತ್ತದೆ. ಸುಮಾರು 15 ದಿನಗಳ ಅವಧಿಯಲ್ಲಿ ಈ ಚಿಕಿತ್ಸೆ ನೀಡುತ್ತಾರೆ. ಈ ಚಿಕಿತ್ಸೆ ಆರಂಭಿಸಲು ಬ್ಲ್ಯಾಕ್ ವಾಟರ್ ಕಲರ್ ಸ್ಕೆಚ್ ಪೆನ್ ಇದ್ದರೆ ಸಾಕು. ಈ ಮೂಲಕ ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು ಎನ್ನುತ್ತಾರೆ ಅಕ್ಯೂಪ್ರೆಶರ್ ತಜ್ಞೆ ಡಾ.ಸುಮಾ. ಆರ್.








