ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಪಂ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ನಡೆದ ತೀವ್ರ ಹಣಾಹಣಿ ನಡೆದಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಸಿನಿಮಯ ರೀತಿಯಲ್ಲಿ ಅಪಹರಿಸಿರುವ ಘಟನೆ ನಡೆದಿದೆ.
18 ಸದಸ್ಯರನ್ನೊಳಗೊಂಡಿರುವ ಐನೊಳ್ಳಿ ಗ್ರಾಪಂನ ಅಧಿಕಾರಕ್ಕಾಗಿ ಈ ಬಾರಿ ಅಧಿಕಾರಕ್ಕಾಗಿ ಬಿಜೆಪಿ ಬೆಂಬಲಿತ 11 ಸದಸ್ಯರು ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರ ಪ್ರವಾಸಕ್ಕೆ ತೆರಳಿದ್ದರು. ಕಾಂಗ್ರೆಸ್- ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೆಲವು ಸದಸ್ಯರು ಮಹಾರಾಷ್ಟ್ರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ತಿಳಿದು, ಲಾಡ್ಜ ನಲ್ಲಿದ್ದ 6 ಜನ ಬಿಜೆಪಿ ಸದಸ್ಯರನ್ನು ಸಿನೀಮಿಯ ರೀತಿಯಲ್ಲಿ ಅಪಹರಣ ಮಾಡಲಾಗಿದೆ. ಪುಣೆಯ ಲಾಡ್ಜ್‌ನಿಂದ ಅಪಹರಣ ಮಾಡುವ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ. ಹತ್ತಕ್ಕೂ ಹೆಚ್ಚು ಜನ ಲಾಡ್ಜಗೆ ನುಗ್ಗಿ ನಾಲ್ವರು ಸದಸ್ಯರ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.








