ಬಾಗಲಕೋಟೆ: ಮದ್ಯ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಕರ ಹಾಗೂ ಪ್ರಿಯತಮೆ ಮಧ್ಯೆ ಗಲಾಟೆ ನಡೆದಿದ್ದು, ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಬೀಳಗಿ (Bilagi) ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ. ಅಜಯ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಜಯ್ ಪ್ರೇಯಸಿ ಅನು ಜೊತೆ ಸ್ನೇಹಿತನ ಊರು ನಿಂಗಾಪುರಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ಸ್ನೇಹಿತ ನವೀನ್ ಜೊತೆ ಸೇರಿ ಮದ್ಯ ಸೇವಿಸಿದ್ದಾನೆ. ಈ ವಿಚಾರಕ್ಕೆ ಪ್ರೇಯಸಿ ಕೋಪಗೊಂಡಿದ್ದಾಳೆ. ನಂತರ ಅಲ್ಲಿಂದ ಊರಿಗೆ ಬಿಟ್ಟು ಬರುವಂತೆ ಪಟ್ಟು ಹಿಡಿದು, ನವೀನ್ ಜೊತೆ ಬೈಕ್ ನಲ್ಲಿ ತೆರಳಿದ್ದಾಳೆ.
ನವೀನ್ ಅನುವನ್ನು ಬೈಕ್‌ನಲ್ಲಿ (Bike) ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ನನ್ನ ಬಿಟ್ಟು ಹೊರಟರೆ ನೇಣು ಹಾಕಿಕೊಂಡು ಸಾಯುವುದಾಗಿ ಅಜಯ್ ವಿಡಿಯೋ ಕಾಲ್ ಮಾಡಿದ್ದ. ಬಳಿಕ ಅನು ಹಾಗೂ ನವೀನ್ ಮರಳಿ ಬರುವಷ್ಟರಲ್ಲಿ ನೇಣು ಹಾಕಿಕೊಂಡಿದ್ದಾನೆ. ನೇಣು ಬಿಡಿಸಿ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಅಜಯ್ ಸಾವನ್ನಪ್ಪಿದ್ದಾನೆ. ತನ್ನ ಮೇಲೆ ಬರುತ್ತದೆ ಎಂದು ನವೀನ್, ಅನು ಹಾಗೂ ಶವವನ್ನು ಬಿಟ್ಟು ಓಡಿ ಹೋಗಿದ್ದಾನೆ. ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.