ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ಪಡೆಗಳು ಗಡಿಯಾಚೆಯಿಂದ ಒಳನುಸುಳುವಿಕೆಗೆ ಯತ್ನಿಸಿದವರ ಪ್ರಯತ್ನ ವಿಫಲಗೊಳಿಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಗ್ವಾರ್ ಸೆಕ್ಟರ್ನಲ್ಲಿ ಕೆಲವು ಭಯೋತ್ಪಾದಕರು ಭಾರತೊಳಗೆ ನುಸುಳಲು ಯತ್ನಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಎನ್ಕೌಂಟರ್ನಲ್ಲಿ ನಡೆಸಿದ್ದು, ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸೇನೆಯ ಹೊಂಚುದಾಳಿ ತಂಡವು ಗರ್ಹಿ ಬೆಟಾಲಿಯನ್ ಪ್ರದೇಶದಲ್ಲಿ ಮುಂಜಾನೆ 2ಕ್ಕೆ ಭಯೋತ್ಪಾದಕರ ಬಗ್ಗೆ ಸುಳಿವು ಪಡೆದು ಗುಂಡಿನ ಚಕಮಕಿ ನಡೆಸಿರುವುದಾಗಿ ಜಮ್ಮು ಮೂಲದ ರಕ್ಷಣಾ ಪಿಆರ್ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ತಿಳಿಸಿದ್ದಾರೆ.








