ಕೊರೊನಾ ನಂತರದ ದಿನಗಳಿಂದ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಚಿತ್ರರಂಗವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇಂದು ಬೆಳಿಗ್ಗೆಯಷ್ಟೇ ಸ್ಪಂದನ ವಿಜಯ್ ಹೃದಯಾಘಾತಕ್ಕೆ ಬಲಿಯಾಗಿದ್ದರೆ, ಇದರ ಬೆನ್ನಲ್ಲಿಯೇ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ಖ್ಯಾತ ನಿರ್ದೇಶಕ ಸಿದ್ಧಿಕಿ (Malayalam Director Siddique) ಇಂದು (ಆಗಸ್ಟ್ 07) ಹೃದಯಾಘಾತ (Heart Attack) ವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ 69 ವರ್ಷ ವಯಸ್ಸಾಗಿದ್ದು, ಹೃದಯಾಘಾತದ ನಂತರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಗೆಳೆಯ ಲಾಲ್ ಜೊತೆ ಸೇರಿ ಅವರು ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ-ಲಾಲ್ ಎಂದೇ ಖ್ಯಾತರಾದ ಅವರಿಬ್ಬರು ಜಂಟಿಯಾಗಿ ಅನೇಕ ಸಿನಿಮಾಗಳಿಗೆ ಕಥೆ-ಚಿತ್ರಕಥೆ ಬರೆದಿದ್ದಾರೆ. ಸಿದ್ಧಿಕಿ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಕೊಚ್ಚಿಯ ಆಸ್ಪತ್ರೆಯಲ್ಲಿ ಸಿದ್ಧಿಕಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಲಯಾಳಂನ ‘ರಾಮ್ಜಿ ರಾವ್ ಸ್ಪೀಕಿಂಗ್’, ‘ಇನ್ ಹರಿಹರ್ ನಗರ್’, ‘ಗಾಡ್ಫಾದರ್’, ‘ವಿಯಾಟ್ನಾಂ ಕಾಲೋನಿ’ ಸೇರಿದಂತೆ ಹಲವಾರು ಉತ್ತಮ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.







