ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

admin by admin
October 16, 2026
in Cinema, Newsbeat, Uncategorized, ಮನರಂಜನೆ
Share on FacebookShare on TwitterShare on WhatsappShare on Telegram

​ ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆ ಬರೆಯುತ್ತಿರುವ ಚಿತ್ರತಂಡವನ್ನು ಖುದ್ದಾಗಿ ಭೇಟಿಗೆ ಆಹ್ವಾನಿಸಿದ ಯಶ್, ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.

ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟನಿಂದ ಸಿಕ್ಕ ಈ ಅಭಿನಂದನೆ ಚಿತ್ರತಂಡಕ್ಕೆ ಹೊಸ ಹುರುಪು ಹಾಗೂ ಸ್ಫೂರ್ತಿ ತುಂಬಿದೆ.
​ಮನೋಜ್ ಕುಮಾರ್ ನಿರ್ದೇಶನದ ಹಾಗೂ ‘ವೆನಿಲ್ಲಾ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾವನಾತ್ಮಕ ಕಥಾಹಂದರ ಹಾಗೂ ಕಲಾವಿದರ ಅದ್ಭುತ ಅಭಿನಯದಿಂದ ಕನ್ನಡಿಗರ ಹೃದಯ ಗೆದ್ದಿರುವ ಈ ಚಿತ್ರ, ಕೇವಲ ಬಾಯಿಮಾತಿನ ಪ್ರಚಾರದ ಬಲದಿಂದಲೇ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರುವಂತೆ ಮಾಡಿದೆ.

Related posts

saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 16, 2026
saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

October 16, 2026

ಚಿತ್ರತಂಡದ ಶ್ರಮವನ್ನು ಗುರುತಿಸಿ ಬೆಂಬಲಿಸುವ ಯಶ್ ಅವರ ಈ ಪ್ರೋತ್ಸಾಹದ ನಡೆಗೆ ಚಿತ್ರತಂಡ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದೆ.
​ವಿಶೇಷವೆಂದರೆ, ‘ಜೈಲರ್ 2’ ಮತ್ತು ‘ರಣಬಾಲಿ’ಯಂತಹ ಭಾರೀ ಬಜೆಟ್‌ನ ಬಿಗ್ ರಿಲೀಸ್‌ಗಳು ಎದುರಾಗಿದ್ದರೂ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ ಕಿಂಚಿತ್ತೂ ತಗ್ಗಿಲ್ಲ. ಘಟಾನುಘಟಿ ಪರಭಾಷಾ ಮತ್ತು ಸ್ವಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಾ ತನ್ನ ಗಟ್ಟಿ ನೆಲೆಯನ್ನು ಉಳಿಸಿಕೊಂಡಿದೆ.

ಪ್ರೇಕ್ಷಕರ ಪ್ರೀತಿ ಹಾಗೂ ಗಟ್ಟಿ ಕಂಟೆಂಟ್‌ ಬಲದಿಂದ ಮುನ್ನುಗ್ಗುತ್ತಿರುವ ಈ ಚಿತ್ರ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದು, ಅತಿ ಶೀಘ್ರದಲ್ಲೇ ₹100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.

ShareTweetSendShare
Join us on:

Related Posts

saakshatv-r-ashoka-congress-government-disability-pension-salary-hike-demand

ವಿಕಲಚೇತನರ ಹಣಕ್ಕೆ ಕೈ ಹಾಕಿದ ಕಾಂಗ್ರೆಸ್‌ ಸರ್ಕಾರ, ವೇತನ ಹೆಚ್ಚಳ ಮಾಡಬೇಕು, ಪಿಂಚಣಿ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 16, 2026
0

ರಾಮನಗರ, ಗ್ಯಾರಂಟಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಈಗ ಅಂಗವಿಕಲರ ಪಿಂಚಣಿ ಹಣಕ್ಕೂ ಕೈ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು....

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

by admin
October 16, 2026
0

ಬೆಂಗಳೂರು: ದಸರಾ ಸಂಭ್ರಮ, ದೀಪಾವಳಿ ಪಾರ್ಟಿ, ಹಬ್ಬದ ಭೋಜನ ಹಾಗೂ ಸಂಭ್ರಮಕ್ಕೆ ತಯಾರಾಗಲು ಇನ್‌ಸ್ಟಾಮಾರ್ಟ್ ತನ್ನ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ಆರಂಭಿಸಿದೆ....

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

by admin
October 16, 2026
0

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

saakshatv-bgmi-air-krafton-india-1-crore-pre-registrations

‘BGMI Air’ ಆಗಿ ಬದಲಾದ ‘BGMI Lite’: ಬಿಡುಗಡೆಗೂ ಮುನ್ನವೇ 1 ಕೋಟಿಗೂ ಅಧಿಕ ಪ್ರಿ-ರಿಜಿಸ್ಟ್ರೇಷನ್ ದಾಖಲೆ!

by admin
October 16, 2026
0

ಬೆಂಗಳೂರು: ಪ್ರಸಿದ್ಧ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಡಿಯಾ ತನ್ನ ಮುಂಬರುವ ಮೊಬೈಲ್ ಗೇಮ್ 'ಬಿಜಿಎಂಐ ಲೈಟ್' ಹೆಸರನ್ನು 'ಬಿಜಿಎಂಐ ಏರ್' ಎಂದು ಅಧಿಕೃತವಾಗಿ ಬದಲಾಯಿಸಿದೆ. ಭಾರತದಲ್ಲಿ ಈ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram