ಗುರುಗ್ರಾಮದಲ್ಲಿನ ಮಾಜಾರ್ ಗೆ ಅನಾಮಿಕ ವ್ಯಕ್ತಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಆ ಸ್ಥಳದ ಉಸ್ತುವಾರಿ ಘಾಸಿತೆ ರಾಮ್ ಈ ಕುರಿತು ಮಾಹಿತಿ ನೀಡಿದ್ದು, ಖಂಡ್ಸಾ ಗ್ರಾಮದಲ್ಲಿನ ಮಾಜಾರ್ ನಲ್ಲಿ ನಾನು ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಎಲ್ಲವೂ ಸಹಜವಾಗಿತ್ತು. ಆದರೆ, ರಾತ್ರಿ ವೇಳೆ ಸುಮಾರು 1.30ಕ್ಕೆ ಮಾಜಾರ್ ಬಳಿ ವಾಸಿಸುವ ವ್ಯಕ್ತಿಯೋರ್ವರು ಕರೆ ಮಾಡಿ, ಗುರುತು ಹಿಡಿಯಲಾಗದ ವ್ಯಕ್ತಿಗಳು ಮಜಾರ್ ಗೆ ಬೆಂಕಿ ಹಾಕಿದ್ದಾರೆ ಎಂದು ಹೇಳಿದರು.
ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ನಾನು ಅಲ್ಲಿಗೆ ಹೋದಾಗ ಮಜಾರ್ನ ಬಾಗಿಲಿನೊಳಗೆ ಇಟ್ಟಿದ್ದ ಕಾಣಿಕೆಗಳು ಸುಟ್ಟುಹೋಗಿದ್ದವು. ಘಟನೆಯಿಂದಾಗಿ ಜನರ ನಂಬಿಕೆಗಳಿಗೆ ಘಾಸಿ ಉಂಟಾಗಿದ್ದು, ಸಮಾಜದಲ್ಲಿ ಗಲಭೆಗೆ ಕಾರಣವಾಗಬಹುದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೆಂಕಿ ಹಚ್ಚಿದ ಮಾಜರ್ ಪೀರ್ ಬಾಬಾರ ದಶಕಗಳ ಹಿಂದಿನದ್ದಾಗಿದೆ. ಇಲ್ಲಿ ಪ್ರತಿ ದಿನ ತೆರಳಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದರು.








