ಸ್ವದೇಶಿ ಡಾಬರ್ ಕಂಪನಿ ಹುಟ್ಟಿದ್ದು ಹೇಗೆ? ನಿಮಗೆ ಗೊತ್ತಾ?
How Swadeshi Dabur Company was born? do you know
ಡಾಬರ್ ಚವನ್ ಪ್ರಶ್ ಈ ಹೆಸರು ನೀವು ಕೇಳಿರುತ್ತಿರಿ ಮತ್ತು ಈ ಆಯುರ್ವೇದದ ಚವನ್ ಪ್ರಶ್ ಅನ್ನು ತಿಂದಿರುತ್ತೀರಿ. ಸದ್ಯ ದೇಶದಲ್ಲಿ ಈ ಕಂಪನಿಯ ನೂರಾರು ಉತ್ಪನ್ನಗಳು ಮಾರಾಟವಾಗುತ್ತಿವೆ. ದೇಶ, ವಿದೇಶಗಳಲ್ಲಿ ಕಂಪನಿಯ ಬ್ರ್ಯಾಂಚ್ ಗಳಿವೆ. ಹಾಗಿದ್ದರೆ ಈ ಕಂಪನಿ ಯಾವಾಗ ಜನನವಾಯಿತು? ಸ್ಥಾಪಕರು ಯಾರು? ಇಲ್ಲಿದೆ ಮಾಹಿತಿ.
ಅದು 18 ನೇ ಶತಮಾನ ದೇಶದಲ್ಲಿ ಕಾಲರಾ ರೋಗ ಜನರನ್ನು ಬಾದಿಸುತ್ತಿತ್ತು. 1880 ರ ದಶಕದ ಮಧ್ಯಭಾಗದಲ್ಲಿ ಕಲ್ಕತ್ತಾದಲ್ಲಿ ಅನೇಕ ಜನರು ಕಾಲರಾ ರೋಗಿಗೆ ತುತ್ತಾದರು. ರೋಗದಿಂದ ಬಳಲುತ್ತಿರುವ ಜನರಿಗೆ ಔಷಧಿ ನೀಡಬೇಕು ರೋಗದಿಂದ ಮುಕ್ತರಾಗಬೇಕು ಎಂದು ಓರ್ವ ವೈದ್ಯ ಮುಂದಾದರು.
ಅವರ ಹೆಸರು ಡಾ. ಎಸ್.ಕೆ. ಬರ್ಮನ್. ಆಯುರ್ವೇದ ವೈದ್ಯರಾದ ಡಾ. ಎಸ್.ಕೆ. ಬರ್ಮನ್ ಅವರು ಮೂಲತಃ ಪಂಜಾಬಿನವರಾಗಿದ್ದು ಕೊಲ್ಕತ್ತಾಕ್ಕೆ ವಲಸೆ ಬಂದವರು.
ಕೊಲ್ಕತ್ತಾದಲ್ಲಿ ಕಾಲರಾ ರೋಗ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಕಂಡರು. ನಂತರ ಈ ರೋಗದಿಂದ ಬಳಲುತ್ತಿರುವವರಿಗಾಗಿ ಆಯುರ್ವೇದ ಔಷಧಿ ಕಂಡು ಹಿಡಿದರು. ನಂತರ ಸೈಕಲ್ ಮೇಲೆ ಊರುರು ಸುತ್ತುತ್ತ ಜನರಿಗೆ ಚಿಕಿತ್ಸೆ ನೀಡಲು ಆರಂಭಿಸಿದರು.
ಹೀಗೆ ಚಿಕಿತ್ಸೆ ನೀಡವ ವೇಳೆ ರೋಗಿಗಳು ನಿಮ್ಮ ಔಷಧದ ಹೆಸರೇನು ಎಂದು ಕೇಳಿದಾಗ, “ಡಾಬರ್” ಎಂದು ಹೇಳಿದರು. ಹೀಗೆ 1884 ರಲ್ಲಿ ಡಾಬರ್ ಕಂಪನಿ ಸ್ಥಾಪನೆಯಾಯಿತು.
ಮುಂದೆ 19 ನೇ ಶತಮಾನದಲ್ಲಿ ಎಸ್ ಕೆ ಬರ್ಮನ್ ಅವರ ಮಗ CL ಬರ್ಮನ್ 1919ರಲ್ಲಿ ಆಯುರ್ವೇದ ಔಷಧಿಗಳನ್ನು ತಯಾರಿಸಲು ಆರಂಭಿಸಿದರು. ಸಿಎಲ್ ಬರ್ಮನ್ ಅವರು ಡಾಬರ್‌ನ ಮೊದಲ R&D ಘಟಕವನ್ನು ಸ್ಥಾಪಿಸಿದರು. ನಂತರ ಸಿಲ್ ಬರ್ಮನ್ ಅವರ ಮಗ ಜಿಸಿ ಬರ್ಮನ್ ಅವರು ಡಾಬರ್ ಕಾರ್ಖಾನೆಯನ್ನು ಕೊಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಿದರು.
1920ರಲ್ಲಿ ಕಂಪನಿಯು ಬಿಹಾರದಲ್ಲೊಂದು ಶಾಖೆ ಆರಂಭಿಸಿತು. 1940ರಲ್ಲಿ Dabur Alma hair oil ತಯಾರಿಸಿತು. ಇದು ಕಂಪನಿಗೆ ಅಧಿಕ ಲಾಭ ತಂದುಕೊಟ್ಟಿತು. 1949 ರಲ್ಲ ಡಾಬರ್ ಚವನ್ ಪ್ರಶ್ ತಯಾರಿಸಿತು. ಕಂಪನಿ ಹೇಗೆ ತನ್ನ ಬಾಹುಬಲವನ್ನು ವಿಸ್ತಾರಗೊಳಿಸುತ್ತಾ ಹೊರಟಿತೊ ಹಾಗೆ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿತು.
1986 ರಲ್ಲಿ ಡಾಬರ್ ಇಂಡಿಯಾ ಲಿಮಿಟೆಡ್ ಆಗಿ ಮರುನಾಮಕರಣ ಮಾಡಲಾಯಿತು. ಮುಂದೆ 1994 ರಲ್ಲಿ 21 ಪ್ರಾಡಕ್ಟ್ ಗಳನ್ನು ಉತ್ಪಾದನೆ ಮಾಡಲು ಶುರುಮಾಡಿತು. ಈ ಸಂಖ್ಯೆ ಏರುತ್ತಾ ಸಾಗಿತು.
139 ವರ್ಷಗಳ ಹಳೆಯದಾದ ಸ್ವದೇಶಿ ಕಂಪನಿ ಪ್ರಸ್ತುತ 154 ಪ್ರಾಡಕ್ಟ್ ಗಳನ್ನು ಉತ್ಪಾದನೆ ಮಾಡುತ್ತದೆ. ಜಗತ್ತಿನ 100 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 30 ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರಲ್ಲಿ 10 ವಿದೇಶದಲ್ಲಿವೆ.
ಭಾರತದಲ್ಲಿ ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ, ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ತಮಿಳುನಾಡು, ಪಂಜಾಬ್, ಮಣಿಪುರ ಮತ್ತು ಚಂಡಿಗಡನಲ್ಲಿ ಕಂಪನಿಯು ಶಾಖೆಗಳಿವೆ. ಕಂಪನಿ ಸದ್ಯ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.








