ತರಗತಿಯಲ್ಲಿಯೇ ಉಪನ್ಯಾಸಕರ ಎದುರು ಯುವಕನೊಬ್ಬ ಯುವತಿಗೆ ಪ್ರೇಮ ನಿವೇದನೆ ಮಾಡಿರುವ ಪ್ರಸಂಗವೊಂದು ನಡೆದಿದೆ. ಅಲ್ಲದೇ, ನೀನು ನನ್ನ ಪ್ರೀತಿಸಬೇಕು. ಇಲ್ಲದಿದ್ದರೆ ನಿನ್ನ ಸಾಯಿಸಿ ಬಿಡುತ್ತೇನೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾನೆ. ಈತನ ಕಾಟಕ್ಕೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ.
ಚಿತ್ತೂರು ಮೂಲದ ಪವನ್ ಕುಮಾರ್ ಎಂಬಾತ ನಟ ವಿಜಯ್ ದೇವರಕೊಂಡ ಅಭಿಯಾನದ ಅರ್ಜುನ್ ರೆಡ್ಡಿ ಸಿನಿಮಾದಂತೆ ಕ್ಲಾಸ್ ರೂಮಿಗೆ ಹೋಗಿ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಕಾಲೇಜಿನ ಕ್ಲಾಸ್ ರೂಮ್ ಗೆ ತೆರಳಿ ಉಪನ್ಯಾಸಕರ ಎದುರು ಯುವತಿಗೆ ಇವಳು ನನ್ನ ಲವರ್ ಎಂದು ತಾನೇ ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿನಿಯು ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಯುವತಿಗೆ ಪವನ್ ಕುಮಾರ್ ಎಂಬಾತ ಕಿರುಕುಳು ನೀಡುತ್ತಿದ್ದಾನೆ. ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜಿಗೆ ಹೋಗಿ, ಉಪನ್ಯಾಸಕರ ಎದುರು ಈ ರೀತಿ ಮಾಡಿದ್ದಾನೆ. ಈ ಕುರಿತು ಯುವಕನ ಕಿರುಕುಳ ತಾಳಲಾರದೆ ಯುವತಿ ಚಿತ್ತೂರಿನಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಚಿತ್ತೂರಿನಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಕೇಸ್ ವರ್ಗಾಯಿಸಲಾಗಿದ್ದು, ಯುವಕಿನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.







