ಮಹಿಳೆಯೊಬ್ಬರು (Woman) ತಮ್ಮ 7 ವರ್ಷದ ಮಗುವಿನೊಂದಿಗೆ ಬನ್ನೇರುಘಟ್ಟ(bannerghatta) ಹತ್ತಿರದ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು(Bengaluru) ನಗರ ಜಿಲ್ಲೆ ಬನ್ನೇರುಘಟ್ಟ ಹತ್ತಿರ ಇರುವ ಸಕಲವಾರ ಕೆರೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ವಿಜಯಲಕ್ಷ್ಮೀ(35) ಹಾಗೂ ಮಗ ಹರಿಹರನ್(7) ಸಾವನ್ನಪ್ಪಿದ್ದಾರೆ.
ಆಂಧ್ರ ಮೂಲದ ಸಿಕೆ ಪಾಳ್ಯದಲ್ಲಿ ವಾಸವಿದ್ದ ವಿಜಯಲಕ್ಷ್ಮೀ, ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಅವರ ಪತಿಯನ್ನು ಕಳೆದುಕೊಂಡಿದ್ದರು. ಅವರು ಸಾವನ್ನಪ್ಪಿ 2 ವರ್ಷವಾಗಿತ್ತು. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಮಹಿಳೆ, 2 ವರ್ಷದ ದಿನವೇ ಮಗುವಿನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನ ಹೊರತೆಗೆದಿದ್ದಾರೆ.








