ತಿರುವನಂತಪುರ : ಕೊಳೆತ ಸ್ಥಿತಿಯಲ್ಲಿ 6 ತಿಂಗಳ ಮಗುವೊಂದು ಪತ್ತೆಯಾಗಿರುವ ಘಟನೆ ಕೇರಳದ (Kerala) ತಿರುವಲ್ಲಾ ಹತ್ತಿರ ನಡೆದಿದೆ.
ತಿರುವಲ್ಲಾ (Thiruvalla) ಹತ್ತಿರದ ರಸ್ತೆ ಪಕ್ಕದ ಜೌಗು ಪ್ರದೇಶದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸಮೀಪದ ಅಂಗಡಿ ಮಾಲೀಕರೊಬ್ಬರು ಮೂಲ ಹುಡುಕಿಕೊಂಡು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೃತದೇಹವು ಕೈಕಾಲುಗಳನ್ನು ಕಳೆದುಕೊಂಡಿದೆ. ಗುರುತಿಸಲು ಸಾಧ್ಯವಾಗ ಮಟ್ಟಿಗೆ ಮುಖ ಕೊಳೆತಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆ ಪ್ರದೇಶದಲ್ಲಿನ ಅಂಗಡಿಗಳು ಮತ್ತು ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.








