ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ(Karnataka Rains). ಈ ನಿಟ್ಟಿನಲ್ಲಿ ಹಲವು ಕಡೆ ಬರದ ಪರಿಸ್ಥಿತಿ ಆವರಿಸಿದೆ.
ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ(Siddaramaiah), ಕೆಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು ಬರಪೀಡಿತ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಾವಳಿ ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಕಚೇರಿಯಿಂದ ಕೇಂದ್ರದ ಕೃಷಿ ಸಚಿವಾಲಯಕ್ಕೆ ಪತ್ರ ರವಾನೆಯಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬರಪೀಡಿತ ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಘೋಷಣೆಗೆ ಕೇಂದ್ರ ಸರ್ಕಾರದ ಷರತ್ತುಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಬರ ಘೋಷಣೆ ಸಂಬಂಧ ಸಿದ್ಧಪಡಿಸಿರುವ ನಿಯಮಾವಳಿಗಳನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು. ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಶೇ 33% ಬೆಳೆಹಾನಿಗೆ ಪರಿಹಾರದ ಅವಕಾಶವಿದೆ. ಆದರೆ ಬರಕ್ಕೆ ಶೇ 50 % ಹಾನಿ ಆಗಬೇಕು. ಬರ ಘೋಷಣೆಗೆ ಕನಿಷ್ಟ ಶೇ 60% ಮಳೆ ಕೊರತೆಯಾಗಿರಬೇಕು. ಕನಿಷ್ಟ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು. ಮಳೆ ಕೊರತೆ ಪ್ರಮಾಣ 60% ರಿಂದ 30% ಕ್ಕೆ ಇಳಿಸಬೇಕು ಎಂದು ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿ ಕೋರಿದ್ದಾರೆ.








