ಬೆಂಗಳೂರು : ಇಂದು ಇಡೀ ಜಗತ್ತಿಗೆ ಭಾರತದ ಅವಶ್ಯಕತೆ ಇದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
77ನೇ ಸ್ವಾತಂತ್ರೋತ್ಸವ ದಿನಾಚರಣೆ (Independence Day) ಹಿನ್ನೆಲೆಯಲ್ಲಿ (Bengaluru) ಬಸವನಗುಡಿಯಲ್ಲಿ (Basavanagudi) ಆರ್ಎಸ್ಎಸ್ (RSS) ಮುಖ್ಯಸ್ಥ ಡಾ. ಮೋಹನ್ ಭಾಗವತ್ (Mohan Bhagwat) ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇದ್ದರು. ಇಡೀ ವಿಶ್ವಕ್ಕೆ ಭಾರತವೇ ಬೆಳಕು. ಬೆಳಕು ನೀಡುವುದಕ್ಕಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ದೇಶದಲ್ಲಿನ ನಾವೆಲ್ಲ ಸಬಲರಾಗಿದ್ದೇವೆ. ತ್ಯಾಗ ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ನಾವೆಲ್ಲ ಅಸ್ಮಿತೆಯ ಆಧಾರದ ಮೇಲೆ ದೇಶ ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ ಆದರೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವತಂತ್ರ್ಯ ಸಿಗುತ್ತದೆ ಎದು ಹೇಳಿದ್ದಾರೆ.








