ನವದೆಹಲಿ : ಲಡಾಖ್ ಗಡಿಯಲ್ಲಿ ಭಾರತ – ಚೀನಾ ನಡುವೆ ನಡೆದ ಸಂಘರ್ಷದ ಪರಿಣಾಮದಿಂದಾಗಿ ಎರಡು ದೇಶಗಳ ನಡುವೆ ಶೀತಲ ಸಮರ ನಡೆಯುತ್ತಿದೆ. ಮೊದಲಿಂದಲೂ ಭಾರತದ ವಿರುದ್ದ ಚೀನಾ ಒಂದೊಂದು ಟೈಮ್ ನಲ್ಲಿ ಒಂದೊಂದು ಷ್ಯಡ್ಯಂತ್ರ ಮಾಡುತ್ತಲೆ ಬರುತ್ತಿದೆ. ಇದೀಗ ಚೀನಾ ಬೆಂಬಲಿತ ಹ್ಯಾಕರ್ ಗಳು ಭಾರತ ಸರ್ಕಾರ ಮತ್ತು ಭಾರತ ಉದ್ಯಮ ಸಂಸ್ಥೆಗಳು ಮೇಲೆ ಸೈಬರ್ ದಾಳಿ ಮಾಡುವ ಷ್ಯಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಲಡಾಖ್ ಗಡಿಯಲ್ಲಿ ಬಾರತ -ಚೀನಾ ನಡುವೆ ನಡೆದ ಸಂಘರ್ಷದಿಂದ ಭಾರತದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂಬ ಚರ್ಚೆ ಜೋರಾಗಿ ನಡೆದಿದೆ. ಇದಕ್ಕೆ ಪ್ರತಿಯಾಗಿ ಚೀನಾ ಬೆಂಬಲಿತರು ಸೈಬರ್ ದಾಳಿ ನಡೆಸಲು ಸಂಜು ರೂಪಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಚೀನಾ ಬೆಂಬಲಿತ ಕಿಡಿಗೇಡಿಗಳು ಕೆಲ ಸರ್ಕಾರಿ ಏಜೆನ್ಸಿಗಳು, ಮಾಧ್ಯಮ ಸಂಸ್ಥೆಗಳು, ಔಷಧ ಕಂಪೆನಿಗಳು, ಟೆಲಿಕಾಂ ಆಪರೇಟರ್ ಸಂಸ್ಥೆಗಳು ಮತ್ತು ಭಾರತದಲ್ಲಿರುವ ದೊಡ್ಡ ದೊಡ್ಡ ಟೈರ್ ಕಂಪೆನಿಗಳನ್ನ ಟಾರ್ಗೆಟ್ ಮಾಡಿ ಸೈಬರ್ ದಾಳಿ ಮಾಡಲು ಚೀನಾ ಬೆಂಬಲಿತರು ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಾಗುತ್ತಿದೆ.
ಚೀನಾ ಬೆಂಬಲಿತರು ಸೈಬರ್ ದಾಳಿ ಮಾಡಲು ಸಿದ್ದತೆ ನಡೆಸಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಸೈಫರ್ಮಾ ತಿಳಿಸಿದೆ. ಸೈಬರ್ ಅಟ್ಯಾಕ್ ಮಾಡಲು ಡಾರ್ಕ್ ವೆಬ್ ನಲ್ಲಿ ಚರ್ಚೆ ನಡೆದಿದೆ. ಜೊತೆಗೆ ಡಾರ್ಕ್ ವೆಬ್ ನಲ್ಲಿ ನಡೆದ ಸಂಭಾಷಣೆ ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಸೈಫರ್ಮಾಗೆ ಲಭ್ಯವಾಗಿದೆ. ಹಾಗಾಗಿ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಸೈಫರ್ಮಾ ಸೂಚಿಸಿದೆ.
ಮೊದಲ ಟಾರ್ಗೆಟ್ ಯಾರು
ಚೀನಾ ಬೆಂಬಲಿತ ಹ್ಯಾಕರ್ ಗಳು ಭಾರತದಲ್ಲಿ ಮೊದಲು ಮಾಧ್ಯಮಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಾಗುತ್ತಿದೆ. ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಸೈಫರ್ಮಾ ನೀಡಿದ ಮಾಹಿತಿ ಪ್ರಕಾರ, 10 ದಿನಗಳ ಹಿಂದೆ ಚೀನೀ ಹ್ಯಾಕರ್ ಗಳು ಭಾರತಕ್ಕೆ ಪಾಠ ಕಲಿಸುವ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ಎಚ್ಚರವಾಗಿರುವಂತೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ಗೆ ಸಿಇಆರ್ ಟಿ – ಇನ್ ಗೆ ಸೈಫರ್ಮಾ ಮಾಹಿತಿ ನೀಡಿದೆ.








