ಕೋಲಾರ: ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಎಂಟನೇ ತರಗತಿ ವಿದ್ಯಾರ್ಥಿ (Student)ಯೇ ಮನೆ ಬಿಟ್ಟು ಹೋದವ. ಈ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿನ ಹರ್ಷಿತ್ ಎಂಬ ವಿದ್ಯಾರ್ಥಿ ಯಾವಾಗಲೂ ಮೊಬೈಲ್ ನಲ್ಲಿಯೇ ಇರುತ್ತಿದ್ದ. ಹೀಗಾಗಿ ಕೋಪಗೊಂಡ ಕುಟುಂಬಸ್ಥರು ಬೈದು ಬುದ್ದಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಬಾಲಕ, ಶಾಲೆಗೆ ಹೋಗಿ, ಅಲ್ಲಿಂದ ಮನೆಗೆ ಮರಳಿ ಬಂದಿಲ್ಲ ಎನ್ನಲಾಗಿದೆ.
ಎಂದಿನಂತೆ ಶುಕ್ರವಾರವೂ ಆತ ಶಾಲೆಗೆ ತೆರಳಿದ್ದ. ಶಾಲೆ ಮುಗಿದ ನಂತರ ಮನೆಗೆ ಬಂದಿರಲಿಲ್ಲ. ಶಾಲೆಯಲ್ಲಿ ತಿರುಪತಿಗೆ (Tirupati) ಹೋಗುವ ಮಾರ್ಗದ ಕುರಿತು ಗೆಳೆಯರನ್ನು ಕೇಳಿದ್ದಾನೆ. ಹೀಗಾಗಿಯೇ ಆತ ತಿರುಪತಿಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಪೋಷಕರು ರಾಬರ್ಟ್ ಸನ್ ಠಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.