ಶಿಕ್ಷಣ ಇಲಾಖೆ 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸಗಳನ್ನು ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಪ್ರವಾಸಕ್ಕೆ ತೆರಳಿರುವ ವಿದ್ಯಾರ್ಥಿಗಳನ್ನು ವಾಪಸು ಬರುವಂತೆ ಸೂಚಿಸಿಲ್ಲ ಎಂದು ಕೂಡ ತಿಳಿಸಿದೆ.
ಎಚ್ಚರಿಕೆ ಕ್ರಮಗಳನ್ನು ವಹಿಸಲು ಸೂಚಿಸಲಾಗಿದೆ.
ಮಕ್ಕಳನ್ನು ಅಪಾಯಕಾರಿ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು.
ಪ್ರವಾಸದ ವೇಳೆ ಉಂಟಾಗುವ ಅವಘಡಕ್ಕೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿಗಳೇ ಜವಾಬ್ದಾರರು.
ಮುರುಡೇಶ್ವರದಲ್ಲಿ ನಡೆದ ದುರಂತದ ಹಿನ್ನೆಲೆ, ಶೈಕ್ಷಣಿಕ ಪ್ರವಾಸ ರದ್ದು ಎನ್ನುವ ಸುದ್ದಿ ಹಬ್ಬಿತ್ತು.