ಹೈದರಾಬಾದ್ : ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂಬ ಶಂಕೆಯಿಂದ ಆತನ ಪತ್ನಿ ಹಾಗೂ ಅತ್ತೆ ಸೇರಿ ಗಟಾಲೆ ಮಾಡಿ, ಅರ್ಧ ತಲೆ ಬೋಳಿಸಿ, ಊರಿನಲ್ಲಿ ಮೆರವಣಿಗೆ ಮಾಡಿರುವ ಘಟನೆ ಆಂಧ್ರ ಪ್ರದೇಶದ (Andhra Pradesh) ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ.
30 ವರ್ಷದ ಹುಸೇನ್ ಹಸ್ನಾಬಾದ್‌ನ 32 ವರ್ಷದ ಮಹಿಳೆ ಶಬಾನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹುಸೇನ್ನ ಹೆಂಡತಿ ನಾಜಿಯಾ ಆರೋಪಿಸಿದ್ದಾರೆ. ನಾಜಿಯಾ ಮತ್ತು ಆಕೆಯ ಕುಟುಂಬಸ್ಥರು ಹುಸೇನ್ ಮತ್ತು ಶಬಾನಾಳ ಕೈ ಕಟ್ಟಿ, ತಲೆಯನ್ನು ಸ್ವಲ್ಪ ಬೋಳಿಸಿ, ಮೆರವಣಿಗೆ ಮಾಡಿದ್ದಾರೆ.
ಕೈಗಳನ್ನು ಕಟ್ಟಿಹಾಕಿ ಆಟೋ ರಿಕ್ಷಾದಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಹುಸೇನ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಶಬಾನಾಳ ಮನೆಗೆ ಹೋಗಿದ್ದ ಪತ್ನಿ, ಅವರಿಬ್ಬರನ್ನೂ ಥಳಿಸಿ ಮೆರವಣಿಗೆ ನಡೆಸಿದ್ದಾಳೆ ಎಂದು ಹಿಂದೂಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಪಿ. ಕಾಂಜಾಕ್ಷನ್ ಹೇಳಿದ್ದಾರೆ.








