ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special

ಏನಿದು ಒಂದು ದೇಶ – ಒಂದು ಚುನಾವಣೆ?

ಸಂವಿಧಾನ ಏನು ಹೇಳುತ್ತೆ...

admin by admin
September 6, 2023
in Saaksha Special, Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಏನಿದು ಒಂದು ದೇಶ – ಒಂದು ಚುನಾವಣೆ? ಸಂವಿಧಾನ ಏನು ಹೇಳುತ್ತೆ..

What is one country – one election?

Related posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

June 22, 2026
ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

June 22, 2026

ಸದ್ಯ ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಲು ಟೊಂಕ ಕಟ್ಟಿ ನಿಂತಿದೆ. ಈ ‘ಒಂದು ದೇಶ ಒಂದು ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿ ರಚಿಸಿದೆ.

ಹಾಗಾದರೆ ಏನಿದು ಒಂದು ದೇಶ ಒಂದು ಚುನಾವಣೆ ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಹಿಂದೆಯೂ ಇದು ಜಾರಿಯಲ್ಲಿತ್ತಾ? ಎಂಬ ಮಾಹಿತಿ ಇಲ್ಲಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ ಈ ಹೆಸರೇ ಹೇಳುವಂತೆ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಇದರ ಉದ್ದೇಶ. ಅಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನವನ್ನು ಏಕಕಾಲದಲ್ಲಿ ನಡೆಸುವುದು. ಪ್ರಸ್ತುತ, ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ಅಷ್ಟು ಸುಲಭವಲ್ಲ. ಈ ಮಸೂದೆಯನ್ನು ಅಂಗೀಕರಿಸಲು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ. ಲೋಕಸಭೆಯ 543 ಸ್ಥಾನಗಳಲ್ಲಿ ಕನಿಷ್ಠ 67 ಪ್ರತಿಶತದಷ್ಟು ಜನರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯಸಭೆಯ 245 ಸ್ಥಾನಗಳಲ್ಲಿ ಶೇ.67ರಷ್ಟು ಜನ ಬೆಂಬಲ ನೀಡಬೇಕು. ಇದರ ಜೊತೆಗೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯ ಮುದ್ರೆಯನ್ನು ನೀಡಬೇಕು. ಅಂದರೆ 14 ರಾಜ್ಯಗಳು ಈ ಮಸೂದೆಯ ಪರವಾಗಿ ನಿಂತರೇ ಮಾತ್ರ ಈ‌ ಮಸೂದೆ ಜಾರಿಯಾಗುತ್ತದೆ.

ಪ್ರಸ್ತುತ 10 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಇದನ್ನು ಬೆಂಬಲಿಸುವ ಪಕ್ಷಗಳು 6 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಲೋಕಸಭೆಯಲ್ಲಿ ಎನ್‌ಡಿಎ 333 ಮತಗಳ ಬಲ ಹೊಂದಿದೆ. ಇದು 61 ಪ್ರತಿಶತಕ್ಕೆ ಸಮನಾಗಿರುತ್ತದೆ. ಇನ್ನು ಶೇ.5ರಷ್ಟು ಮತ ಗಳಿಸುವುದು ಕಷ್ಟವಾಗುತ್ತದೆ. ರಾಜ್ಯಸಭೆಯಲ್ಲಿ ಕೇವಲ ಶೇ.38 ಸ್ಥಾನಗಳಿವೆ ಹೀಗಾಗಿ ಈ ಮಸೂದೆ ಅಂಗಿರವಾಗುವು ಸ್ವಲ್ಪ ಕಷ್ಟವಾಗಬಹುದು

ಇನ್ನೂ ಈ ಒಂದು ದೇಶ ಒಂದು ಚುನಾವಣೆಯಿಂದ ದೇಶಕ್ಕೆ ಆಗುವ ಲಾಭವಾದರು ಏನು? ಮತ್ತು ಒಂದು ದೇಶ ಒಂದು ಚುನಾವಣೆಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ. ಇದರ ಸಾಧಕ ಏನೆಂಬುದು ನೋಡುವುದಾರೇ

2019ರ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ 10,000 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಇತ್ತೀಚೆಗೆ ನಡೆದ ನಮ್ಮ ರಾಜ್ಯ ವಿಧಾನಸಭೆ ಚುನಾವಣೆಗೆ 500 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ವೆಚ್ಚಕ್ಕೆ ರಾಜಕೀಯ ಪಕ್ಷಗಳು ಮಾಡಿದ ಖರ್ಚು ಕೂಡಿಸಿದರೆ ಒಂದು ಕ್ಷಣ ತಲೆ ತಿರಗುತ್ತದೆ. 2019ರ ಲೋಕಸಭೆ ಚುನಾವಣೆಗೆ ಆಯಾ ಪಕ್ಷಗಳ ಖರ್ಚು 60 ಸಾವಿರ ಕೋಟಿ ರೂ.ವರೆಗೆ ಇತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ಹೇಳಿದೆ. ಒಂದು ವೇಳೆ ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೇ ಚುನಾವಣೆಗಾಗಿ ಖರ್ಚಾಗುವ ಸರ್ಕಾರದ ಹಣ ಅಂದರೆ ನಮ್ಮ ತೆರಗೆ ಹಣ ಕಡಿಮೆಯಾಗುತ್ತದೆ.

ಇನ್ನೂ ನಮ್ಮ ದೇಶದಲ್ಲಿ ಒಂದಲ್ಲಾ ಒಂದು ಕ್ಷೇತ್ರ ಅಥವಾ ಸ್ಥಳೀಯ ಮಟ್ಟದಲ್ಲಿ ಚುನಾವಣೆ ಇದ್ದೆ ಇರುತ್ತದೆ. ಈ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿದ್ದರೆ, ಆಡಳಿತ ನಿಧಾನವಾಗುತ್ತದೆ. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾವಣೆ ಏಕಕಾಲಕ್ಕೆ ನಡೆಸಲು ಚಿಂತನೆ ನಡೆದಿದೆ.

ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಅಡೆತಡೆ ಉಂಟಾಗುತ್ತದೆ. ಒಂದೇ ಚುನಾವಣೆಯಿಂದಾಗಿ ಇದನ್ನು ತಡೆಯಬಹುದಾಗಿದೆ. ಹಾಗೇ ಎಲ್ಲ ರೀತಿಯ ಮತದಾನ ಒಂದೇ ಸಮಯದಲ್ಲಿ ನಡೆಯುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಾಗವ ಸಾಧ್ಯತೆ ಇದೆ ಎಂದು ಇದರ ಪರವಾಗಿ ಇದ್ದವರ ವಾದವಾದರೇ, ಇದನ್ನು ವಿರೋಧಿಸುವವರು ಬೇರೆಯದ್ದೇ ವಾದವಿದೆ.
ಇನ್ನೂ ಒಂದು ದೇಶ ಒಂದೇ ಚುನಾವಣೆ ಈ ಹಿಂದೆಯೂ ನಡೆದಿತ್ತು. 1967 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ, ಕೆಲವು ರಾಜ್ಯಗಳ ವಿಧಾನಸಭೆ ವಿಸರ್ಜನೆ ಮತ್ತು 1970 ರಲ್ಲಿ ಲೋಕಸಭೆಯ ಒಂದು ವರ್ಷದ ಮೊದಲು ವಿಸರ್ಜನೆ ಆಗಿದ್ದರಿಂದ ಈ ನೀತಿಯನ್ನು ಮುಂದುವರಿಸಲಾಗಲಿಲ್ಲ.

1983 ರಲ್ಲಿ, ಚುನಾವಣಾ ಆಯೋಗವು ಮತ್ತೊಮ್ಮೆ ಈ ರೀತಿಯ ಚುನಾವಣೆಗೆ ಪ್ರಸ್ತಾಪ ತಂದಿತ್ತು. ಆದರೆ, ಆಗ ಸರ್ಕಾರ ಆಸಕ್ತಿ ತೋರಿಸಲಿಲ್ಲ. 1999ರಲ್ಲಿ ಕಾನೂನು ಆಯೋಗದ ವರದಿ ಇದನ್ನು ಮತ್ತೊಮ್ಮೆ ಎತ್ತಿ ಹಿಡಿದಿತ್ತು. 2016ರಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿದ್ದರು. 2017ರಲ್ಲಿ ನೀತಿ ಆಯೋಗ ಈ ಬಗ್ಗೆ ಕಸರತ್ತು ನಡೆಸಿತ್ತು. 2019ರಲ್ಲಿ ಈ ವಿಚಾರವಾಗಿ ವಿವಿಧ ಪಕ್ಷಗಳ ಮುಖಂಡರ ಜೊತೆ ಪ್ರಧಾನಿ ಸಭೆ ಏರ್ಪಡಿಸಿದ್ದರು. ಆದರೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇದರಿಂದ ದೂರ ಉಳಿದಿದ್ದವು.

ಇದೀಗ ಮತ್ತೆ ಇದು ಮುನ್ನಲೆಗೆ ಬಂದಿದ್ದು, ಸೆಪ್ಟೆಂಬರ್18 ರಿಂದ 22ರ ನಡುವೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ದೇಶ – ಒಂದು ಚುನಾವಣೆ’ ವಿಧೇಯಕವನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ.

Tags: modi on one nation one electionone electionone nationOne Nation One Electionone nation one election billone nation one election debateone nation one election explainedone nation one election in hindione nation one election in indiaone nation one election indiaone nation one election newsone nation one election upscopposition on one nation one electionspm modi on one nation one electionwhat is one nation one election
ShareTweetSendShare
Join us on:

Related Posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

by admin
June 22, 2026
0

56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

by Shwetha
June 22, 2026
0

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿವಾದ ಈಗ ಕೇವಲ ರಾಜಕೀಯಕ್ಕೆ ಸೀಮಿತವಾಗದೆ ಧಾರ್ಮಿಕ ತಿರುವು ಪಡೆದುಕೊಂಡಿದೆ. ತನ್ನ ಶಾಸಕರೇ ಪಕ್ಷಕ್ಕೆ ದ್ರೋಹ ಬಗೆದಿರುವುದು ಬಿಜೆಪಿ ನಾಯಕರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram