ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ತೆರವುಗೊಂಡ ಬಳಿಕ ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದೆ. ಹೀಗೆ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಯಲಹಂಕದ ಜಿಕೆವಿಕೆ ಬಳಿ ನಡೆದಿದೆ.
ಈ ಘಟನೆ ಭಾನುವಾರ ಮುಂಜಾನೆ 6.30 ರ ಹೊತ್ತಿಗೆ ಯಲಹಂಕದ ಜಿಕೆವಿಕೆ ಬಳಿ ಸಂಭವಿಸಿದೆ. ನಾಗವಾರ ಗೋವಿಂದಪುರದ ಮಹ್ಮದ್ ಹದಿ, ಅಹಮದ್ ಖಾನ್ ಹಾಗೂ ಸೈಯದ್ ರಿಯಾಜ್ ಮೃತ ಯುವಕರು ಎಂದು ತಿಳಿದು ಬಂದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಯುವಕರು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಗಳೆರಡೂ ಪೀಸ್ ಪೀಸ್ ಆಗಿವೆ. ಅಲ್ಲದೆ ಈ ಘಟನೆ ಕುರಿತು ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








