ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (ಎಐಬಿಇಎ) ಡಿ. 4 ರಿಂದ ಮುಂದಿನ ವರ್ಷ ಜನವರಿ 20 ರವರೆಗೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದೆ.
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ. ಡಿಸೆಂಬರ್ 4 ರಿಂದ ಜನವರಿ 20 ರವರೆಗೆ ಎರಡು ಹಂತಗಳಲ್ಲಿ 13 ದಿನಗಳ ಮುಷ್ಕರ ನಡೆಸಲಿವೆ. ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಮಾತನಾಡಿ, ಗುಮಾಸ್ತರು ಮತ್ತು ಕೆಳಹಂತದ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವ ಮೂಲಕ ಮೇಲ್ವಿಚಾರಣಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮತ್ತು ಬ್ಯಾಂಕ್ ಗಳು ಪ್ರಯತ್ನಿಸುತ್ತಿವೆ.
ಸಾಮಾನ್ಯ ನೌಕರರ ಬದಲಿಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಎಐಬಿಇಎ ಮುಷ್ಕರವನ್ನು ಎರಡು ಸುತ್ತುಗಳಲ್ಲಿ ಕರೆದಿದೆ. ಮೊದಲ ಹಂತದಲ್ಲಿ ಡಿಸೆಂಬರ್ 4 ರಿಂದ 11 ರವರೆಗೆ ಅಂದರೆ ಒಟ್ಟು 7 ದಿನಗಳವರೆಗೆ ಕರೆಯಲಾಗಿದೆ. ಎರಡನೇ ಹಂತದಲ್ಲಿ ಜನವರಿ 2ರಿಂದ 6ರ ವರೆಗೆ ಒಟ್ಟು 4 ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮೂರನೇ ಹಂತದಲ್ಲಿ 19 ಮತ್ತು 20 ರಂದು ದಿನಾಂಕಗಳನ್ನು ಹೊಂದಿದೆ. ಒಟ್ಟು 13 ದಿನಗಳ ಮುಷ್ಕರ ನಡೆಯಲಿದೆ ಎಂದು ಹೇಳಿದೆ.








