ಭಾರತೀಯ ತಂಡದ ಆರ್ಚರಿ ಆಟಗಾರರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಸಂಯುಕ್ತ ಮಿಶ್ರ ತಂಡದ ಆರ್ಚರಿಯಲ್ಲಿ ಮೊದಲಿಗರಾಗಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಈ ಜೋಡಿ ಫುಯಾಂಗ್ ಯಿನ್ಹು ಸ್ಪೋರ್ಟ್ಸ್ ಸೆಂಟರ್ ಫೈನಲ್ ಫೀಲ್ಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸೊ ಚೇವಾನ್ ಮತ್ತು ಜೂ ಜೇಹೂನ್ ರನ್ನು 159-158ರ ಅಂತರದಿಂದ ಸೋಲಿಸಿತು. ಜ್ಯೋತಿ ಮತ್ತು ಓಜಸ್ ಅವರು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ತಮ್ಮ 71ನೇ ಪದಕ ಗಳಿಸಿತು. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ದಾಖಲೆ ಬರೆಯಿತು.
ಈ ಬಾರಿ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಹಿಂದೆಂದಿಗಿಂತ ಅಧಿಕ ಪದಕ ಗೆದ್ದ ಸಾಧನೆ ಮಾಡಿತು. 2018ರ ಜಕಾರ್ತಾ ಕ್ರೀಡಾಕೂಟದಲ್ಲಿ ಭಾರತ 70 ಪದಕಗಳನ್ನು ಗೆದ್ದು, ಇತಿಹಾಸ ಬರೆದಿತ್ತು. ಇದರಲ್ಲಿ 16 ಚಿನ್ನದ ಪದಕಗಳನ್ನು ಗಳಿಸಿತ್ತು. ಸದ್ಯ ಅದನ್ನು ಸರಿಗಟ್ಟಿದ ಭಾರತ, 16 ಚಿನ್ನದೊಂದಿಗೆ 71 ಪದಕ ಗಳಿಸಿದೆ. ಇನ್ನು ಹಲವಾರು ಕ್ರೀಡೆಗಳು ಬಾಕಿಯಿದ್ದು, 100ರ ಗರಿ ತಲುಪಬಹುದು ಎನ್ನಲಾಗುತ್ತಿದೆ.
ಜ್ಯೋತಿ ಮತ್ತು ಓಜಸ್ ಚಿನ್ನದ ಪದಕ ಗೆಲ್ಲುವುದಕ್ಕಾಗಿ ಪ್ರಭಲ ಪೈಪೋಟಿ ಎದುರಿಸಿದರು. ಮೊದಲಾರ್ಧದ ಅಂತ್ಯದ ನಂತರ ಭಾರತ ತನ್ನ ಎದುರಾಳಿಗಳನ್ನು 40-39 ಅಂತರದಿಂದ ಮುನ್ನಡೆಸಿತು. ದ್ವಿತೀಯಾರ್ಧದಲ್ಲಿ ಭಾರತ ತಂಡ 80-79 ಸ್ಕೋರ್ಕಾರ್ಡ್ ಅನ್ನು ಸಾಧಿಸುವುದರೊಂದಿಗೆ ಅಲ್ಪ ಮುನ್ನಡೆ ಗಳಿಸಿತು. ಆದರೆ ಓಜಸ್ 9 ಅಂಕ ಗಳಿಸಿದ ನಂತರ ಭಾರತ ಮೂರನೇ ಅಂತ್ಯದ ನಂತರ ಮುನ್ನಡೆ ಕಳೆದುಕೊಂಡಿತು. ಸ್ಕೋರ್ಕಾರ್ಡ್ 119-119 ಅಂತರದಲ್ಲಿ ಸಮಬಲಗೊಂಡಾಗ, ಪಂದ್ಯವು ಯಾವುದೇ ರೀತಿಯಲ್ಲಿ ಹೋಗತ್ತೆ ಎಂಬ ಆತಂಕ ಮನೆ ಮಾಡಿತು.
ದಕ್ಷಿಣ ಕೊರಿಯಾದ ಸೊ ಚೇವಾನ್ ಒಂಬತ್ತನ್ನು ಹೊಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟಿರು. ದಕ್ಷಿಣ ಕೊರಿಯಾ ತನ್ನ ಎರಡು ಹೊಡೆತಗಳಲ್ಲಿ 10 ಅಂಕ ಬಾರಿಸಿದರೂ, ಭಾರತವು ಅವರಿಗೆ ಪುನರಾಗಮನಕ್ಕೆ ಅವಕಾಶ ನೀಡಲಿಲ್ಲ.