ADVERTISEMENT
Saturday, June 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

CWC 2023: ಭಾರತಕ್ಕೆ ಆಘಾತ! ಶುಭ್ಮನ್‌ ಗಿಲ್‌ಗೆ ಡೆಂಘೀ ಪಾಸಿಟಿವ್‌: ಆಸೀಸ್‌ ವಿರುದ್ಧದ ಪಂದ್ಯಕ್ಕೆ ಡೌಟ್‌

ಆರಂಭಿಕ ಆಟಗಾರನಿಗೆ ಡೆಂಗ್ಯೂ

Author2 by Author2
October 6, 2023
in Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌ ಡೆಂಫೀ ಜ್ವರ ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಚೆನ್ನೈನಲ್ಲಿ ಅಕ್ಟೋಬರ್‌ 8ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಈಗಾಗಲೇ ಚೆನ್ನೈ ತಲುಪಿರುವ ಟೀಂ ಇಂಡಿಯಾ ಆಟಗಾರರು, ಅಭ್ಯಾಸ ಸಹ ಆರಂಭಿಸಿದ್ದಾರೆ. ಈ ನಡುವೆ ಶುಭ್ಮನ್‌ ಗಿಲ್‌ ಅವರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿರುವುದು ತಂಡಕ್ಕೆ ಆಘಾತ ಮೂಡಿಸಿದೆ. ಭಾರತದ ಬ್ಯಾಟಿಂಗ್‌ ವಿಭಾಗದ ಬಲವನ್ನ ಸಹ ಕುಗ್ಗಿಸಿದೆ.

Related posts

Moisés Caicedo

fifawordcup-2026: ಈತ ಬರೀ ಫುಟ್‍ಬಾಲ್ ಆಟಗಾರನಲ್ಲ.. ಸಾವಿರಾರು ಬಡ ಪ್ರತಿಭೆಗಳಿಗೆ ಬೆಳಕು ನೀಡೋ ನಂದಾದೀಪ..!

June 26, 2026
Brazil football star Neymar

fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್‍ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!

June 26, 2026

ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಶುಭ್ಮನ್‌ ಗಿಲ್‌, ಏಕದಿನ ವಿಶ್ವಕಪ್‌ನಲ್ಲೂ ಇದೇ ಫಾರ್ಮ್‌ ಮುಂದುವರಿಸುವ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಆಸೀಸ್‌ ವಿರುದ್ಧದ ಪಂದ್ಯದ ಬೆನ್ನಲ್ಲೇ ಡೆಂಘೀ ಜ್ವರದಿಂದ ಬಳಲುತ್ತಿರುವುದು ಗಿಲ್‌ ಮಾತ್ರವಲ್ಲದೆ, ಟೀಂ ಇಂಡಿಯಾದ ಅಭಿಮಾನಿಗಳಿಗೂ ಭಾರೀ ನಿರಾಸೆ ಮೂಡಿಸಿದೆ. ಭಾರತದ ಆರಂಭಿಕ ಬ್ಯಾಟಿಂಗ್‌ ಅಸ್ತ್ರವಾಗಿರುವ ಗಿಲ್‌ ಅವರಿಗೆ ಇದೆ ಚೊಚ್ಚಲ ಏಕದಿನ ವಿಶ್ವಕಪ್‌ ಟೂರ್ನಿಯಾಗಿದೆ.
ಬಿಸಿಸಿಐ ಪ್ರಕಾರ, “ಚೆನ್ನೈಗೆ ಬಂದಾಗಿನಿಂದ ಶುಭ್ಮನ್‌ ಗಿಲ್‌ ಅವರಿಗೆ ಅತಿಯಾದ ಜ್ವರ ಕಾಣಿಸಿಕೊಂಡಿದ್ದು, ಅವರ ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಗಿದೆ. ಅಲ್ಲದೇ ಇಂದು ಮತ್ತೊಮ್ಮೆ ಪರೀಕ್ಷೆ ನಡೆಸಿದ ಬಳಿಕ ಮೊದಲ ಪಂದ್ಯದಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಲಾಗಿದೆ.

ಸದ್ಯ ಡೆಂಘೀ ಜ್ವರದಿಂದ ಬಳಲುತ್ತಿರುವ ಗಿಲ್‌, ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂಬ ಆತಂಕ ಸಹ ಮೂಡಿಸಿದೆ. ಸಹಜವಾಗಿ ಡೆಂಘೀ ಜ್ವರದಿಂದ ಚೇತರಿಸಿಕೊಳ್ಳಲು ಕನಿಷ್ಠ 7-8 ದಿನಗಳ ಸಮಯ ಬೇಕಾಗಲಿದೆ. ಹೀಗಾಗಿ ಅ.8ರಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡ, ಅಕ್ಟೋಬರ್‌ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ತನ್ನ 2ನೇ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕೂ ಸಹ ಶುಭ್ಮನ್‌ ಗಿಲ್‌ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಶುಭ್ಮನ್‌ ಗಿಲ್‌ ಶೀಘ್ರವಾಗಿ ಗುಣಮುಖರಾಗಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯವಾಗಿದೆ.

ಗಿಲ್‌ ಬದಲು ಕಿಶನ್‌?
ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಗಿಲ್‌ ಅವರ ಸ್ಥಾನದಲ್ಲಿ ಇಶಾನ್‌ ಕಿಶನ್‌ ಆರಂಭಿಕನಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

Tags: #Ishan KishanCWC 2023CWC 2023: Shock for India! Dengue positive for Shubman Gill: Doubt for match against AussiesShubman Gillsports karnatakateam india
ShareTweetSendShare
Join us on:

Related Posts

Moisés Caicedo

fifawordcup-2026: ಈತ ಬರೀ ಫುಟ್‍ಬಾಲ್ ಆಟಗಾರನಲ್ಲ.. ಸಾವಿರಾರು ಬಡ ಪ್ರತಿಭೆಗಳಿಗೆ ಬೆಳಕು ನೀಡೋ ನಂದಾದೀಪ..!

by admin
June 26, 2026
0

ಬಡತನ ಅವನ ಕಾಲಿಗೆ ಬೂಟ್‍ಗಳನ್ನು ಕೊಡಲಿಲ್ಲ. ಆದ್ರೆ ಹೃದಯಕ್ಕೆ ಧೈರ್ಯ ಕೊಟ್ಟಿತ್ತು. ಹಸಿವು ಆತನ ಹೊಟ್ಟೆಯನ್ನು ಸುಡುವಂತೆ ಮಾಡಿತ್ತು. ಆದ್ರೆ ಕಂಡ ಕನಸುಗಳನ್ನು ಸುಡಲಿಲ್ಲ. ಹೊಟ್ಟೆ ತುಂಬಾ...

Brazil football star Neymar

fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್‍ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!

by admin
June 26, 2026
0

ಫುಟ್‍ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್‍ಬಾಲ್ ಮೈದಾನದಲ್ಲಿ ಚರಿತ್ರೆ...

ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

by Shwetha
June 26, 2026
0

ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್...

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

by admin
June 25, 2026
0

ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲ. ಸುಮಾರು 35-36 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಈ ಕಥಾನಾಯಕನ ಬದುಕಿನ ಚಿತ್ರಣವಂತೂ ಹಾಲಿವುಡ್‍ನ ಥ್ರಿಲ್ಲಿಂಗ್ ಸಿನಿಮಾ ಸ್ಟೋರಿಯನ್ನು...

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram