ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Asian Games: ಹಾಕಿಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತ: ಫೈನಲ್‌ನಲ್ಲಿ ಜಪಾನ್‌ ವಿರುದ್ಧ 5-1ರ ಜಯ

ಒಲಿಂಪಿಕ್ಸ್ ಗೆ ಸ್ಥಾನ ಪಡೆದ ಭಾರತ

Author2 by Author2
October 6, 2023
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಏಷ್ಯನ್‌ ಗೇಮ್ಸ್‌-2023 ಕ್ರೀಡಾಕೂಟದ ಬಹುನಿರೀಕ್ಷಿತ ಪುರುಷರ ಹಾಕಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ, ಫೈನಲ್‌ನಲ್ಲಿ ಜಪಾನ್‌ ತಂಡದ ವಿರುದ್ಧ 5-1ರ ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಭಾರತದ ಪರ ಮನ್‌ಪ್ರೀತ್‌ ಸಿಂಗ್‌, ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಅಭಿಷೇಕ್‌ ಅವರುಗಳು ಗೋಲು ಬಾರಿಸುವ ಮೂಲಕ ಭಾರತಕ್ಕೆ 5-1 ಅಂತರದ ಭರ್ಜರಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಜಪಾನ್‌ ಪರ ಮಿಡ್‌ ಫೀಲ್ಡರ್‌ ಸೆರೆನ್‌ ತನಕ ಏಕೈಕ ಗೋಲು ಬಾರಿಸುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿದರು.

Related posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

August 24, 2026
ks-shilpa-wins-bronze-para-shotput-commonwealth-games-2026-dk-shivakumar-honors

ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪ ಅವರಿಗೆ ಅಭಿನಂದನೆ: 20 ಲಕ್ಷ ರೂ. ಚೆಕ್ ವಿತರಿಸಿದ ಸಿಎಂ ಡಿ.ಕೆ. ಶಿವಕುಮಾರ್

August 21, 2026

ತೀವ್ರ ಪೋಟಿಯಿಂದ ಕೂಡಿದ್ದ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಎರಡು ತಂಡಕ್ಕೂ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಮೊದಲಾರ್ಧದ ಎರಡನೇ ಕ್ವಾರ್ಟರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನ್‌ಪ್ರೀತ್‌ ಸಿಂಗ್‌ 25ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಹೀಗಾಗಿ ಪಂದ್ಯದ ಹಾಫ್‌ ಟೈಮ್‌ ವೇಳೆಗೆ ಭಾರತ 1-0 ಮುನ್ನಡೆ ಸಾಧಿಸಿತ್ತು.

ನಂತರ ಎರಡನೇ ಅವಧಿಯ ಮೊದಲ ಕ್ವಾಟರ್‌ನ ಆರಂಭದಲ್ಲೇ ಹರ್ಮನ್‌ಪ್ರೀತ್‌ 32ನೇ ನಿಮಿಷದಲ್ಲಿ ಭಾರತದ ಪರ 2ನೇ ಗೋಲು ಬಾರಿಸಿ ಮಿಂಚಿದರೆ. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ಅಮಿತ್‌ ರೋಹಿದಾಸ್‌ 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಪರಿಣಾಮ ಭಾರತ 3ನೇ ಕ್ವಾರ್ಟರ್‌ ಅಂತ್ಯಕ್ಕೆ 3-0 ಮುನ್ನಡೆ ಕಾಯ್ದುಕೊಂಡಿತು.
ಬಳಿಕ 4ನೇ ಕ್ವಾರ್ಟರ್‌ನ ಆರಂಭದಲ್ಲೇ ಅಭಿಷೇಕ್‌ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮೇಲುಗೈ ನೀಡಿದರು. ಆದರೆ ಈ ವೇಳೆ ಜಪಾನ್‌ ತಂಡದ ಮಿಡ್‌ಫೀಲ್ಡರ್‌ ಸೆರೆನ್‌ ತನಕಾ, ಪಂದ್ಯದ 51ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಆದರೆ ಪಂದ್ಯದ ಫೈನಲ್‌ ಕ್ವಾರ್ಟರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತೊಂದು ಗೋಲು ಬಾರಿಸುವ ಮೂಲಕ ಗೆಲುವಿನ ಅಂತರವನ್ನ 5-1ಕ್ಕೆ ಹೆಚ್ಚಿಸಿದರು.

4ನೇ ಬಾರಿ ಚಾಂಪಿಯನ್‌:
ಜಪಾನ್‌ ವಿರುದ್ಧ 5-1ರ ಅಂತರದಿಂದ ಗೆದ್ದುಬೀಗಿದ ಟೀಂ ಇಂಡಿಯಾದ ಪುರುಷರ ತಂಡ ಏಷ್ಯನ್‌ ಗೇಮ್ಸ್‌ನಲ್ಲಿ 4ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿತು. ಈ ಹಿಂದೆ 1966, 1998 ಹಾಗೂ 2014ರ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಚಾಂಪಿಯನ್‌ಪಟ್ಟಕ್ಕೇರಿತ್ತು. ಈ ಹಿಂದೆ 2018ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪಂದ್ಯ ಗೆದ್ದಿತ್ತು. ಅಲ್ಲದೇ ಈ ಗೆಲುವಿನ ಮೂಲಕ ಸೌತ್‌ ಕೊರಿಯಾ ನಂತರ ಏಷ್ಯನ್‌ ಗೇಮ್ಸ್‌ನ ಪುರುಷರ ಹಾಕಿ ಕ್ರೀಡೆಯಲ್ಲಿ ಹೆಚ್ಚು ಬಾರಿ ಚಿನ್ನದ ಪದಕ ಗೆದ್ದ 2ನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಯಿತು. ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದ ಪುರುಷರ ಹಾಕಿ ಕ್ರೀಡೆಯ ಯಶಸ್ವಿ ತಂಡವೆನಿಸಿರುವ ಪಾಕಿಸ್ತಾನ ಈವರೆಗೂ 9 ಬಾರಿ ಚಿನ್ನದ ಪದಕ ಗೆದ್ದುಬೀಗಿದೆ.

ಒಲಂಪಿಕ್ಸ್‌ಗೆ ಸ್ಥಾನ ಖಚಿತ:
ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದ ಪುರುಷರ ಹಾಕಿ ಕ್ರೀಡೆಯಲ್ಲಿ ಜಪಾನ್‌ ವಿರುದ್ಧ 5-1ರಿಂದ ಗೆದ್ದು ಬೀಗಿರುವ ಭಾರತ, 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ಗೆ ಸ್ಥಾನ ಪಡೆದುಕೊಂಡಿದೆ.

Tags: asian gamesAsian Games: India won gold in hockey: 5-1 win over Japan in the finalMen's Hockeysports karnatakateam india
ShareTweetSendShare
Join us on:

Related Posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

by admin
August 24, 2026
0

ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ...

ks-shilpa-wins-bronze-para-shotput-commonwealth-games-2026-dk-shivakumar-honors

ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪ ಅವರಿಗೆ ಅಭಿನಂದನೆ: 20 ಲಕ್ಷ ರೂ. ಚೆಕ್ ವಿತರಿಸಿದ ಸಿಎಂ ಡಿ.ಕೆ. ಶಿವಕುಮಾರ್

by admin
August 21, 2026
0

ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಪ್ಯಾರಾ ಶಾಟ್‌ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಪ್ಯಾರಾ ಅಥ್ಲೀಟ್...

anil-kumble-jumbo-fight-cricket-journey

ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ ಬಂತು..?

by admin
August 10, 2026
0

ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

by admin
August 6, 2026
0

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram