ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಡಾವಿಡ್ ಮಲಾನ್, ಧರ್ಮಶಾಲಾದಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 9 ವರ್ಷದ ಹಳೆಯ ದಾಖಲೆಯೊಂದನ್ನ ಬ್ರೇಕ್ ಮಾಡಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಲಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಎಡಗೈ ಬ್ಯಾಟರ್ ಬಿರುಸಿನ ಆಟದ ಮೂಲಕ 107 ಬಾಲ್ಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ಗಳ ನೆರವಿನೊಂದಿಗೆ 140 ರನ್ಗಳಿಸಿ ಮಿಂಚಿದರು. ಈ ಶತಕದೊಂದಿಗೆ ODI ಕ್ರಿಕೆಟ್ನಲ್ಲಿ ವೇಗವಾಗಿ 6ನೇ ಶತಕಗಳನ್ನ ಸಿಡಿಸಿದ ಬ್ಯಾಟರ್ ಎನಿಸಿದರು.
ಅಲ್ಲದೇ ಈ ಶತಕದೊಂದಿಗೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಏಕದಿನ ಕ್ರಿಕೆಟ್ನ ಗರಿಷ್ಠ ಸ್ಕೋರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದರು. ಈ ಹಿಂದೆ 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ 127 ರನ್ಗಳಿಸಿದ್ದು, ಈ ಸ್ಟೇಡಿಯಂನಲ್ಲಿ ದಾಖಲಾದ ಏಕದಿನ ಕ್ರಿಕೆಟ್ನ ಗರಿಷ್ಠ ಸ್ಕೋರ್ ಆಗಿತ್ತು.
ಬಾಂಗ್ಲಾದೇಶ ವಿರುದ್ಧ 113 ರನ್ಗಳಿಸಿದ್ದ ವೇಳೆ ಡಾವಿಡ್ ಮಲಾನ್, ಇಯಾನ್ ಬೆಲ್ ಹೆಸರಿನಲ್ಲಿದ್ದ ಧರ್ಮಶಾಲಾದಲ್ಲಿ ಪ್ರವಾಸಿ ತಂಡದ ಬ್ಯಾಟರ್ ಗಳಿಸಿದ ಏಕದಿನ ಕ್ರಿಕೆಟ್ನ ಗರಿಷ್ಠ ಸ್ಕೋರ್ ದಾಖಲೆ ಸಹ ಮುರಿದರು. ಆರಂಭಿಕ ಬ್ಯಾಟರ್ ಡಾವಿಡ್ ಮಲಾನ್(140) ಹಾಗೂ ಜೋ ರೂಟ್(82) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್, 50 ಓವರ್ಗಳಲ್ಲಿ 9 ವಿಕೆಟ್ಗೆ 364 ರನ್ಗಳಿಸಿತು.
CWC 2023, England, Dawid Malan, Virat Kohli, ODI Cricket