ಟೆಲ್ ಅವೀವ್: ಹಮಾಸ್ (Hamas) ಉಗ್ರರ ದಾಳಿಯಲ್ಲಿ ಭಾರತೀಯ (India) ಮೂಲದ ಇಬ್ಬರು ಇಸ್ರೇಲಿ (Israel) ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ಡೋಡ್ನ ಹೋಮ್ ಫ್ರಂಟ್ ಕಮಾಂಡ್ನಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಓರ್ ಮೋಸೆಸ್ ಹಾಗೂ ಪೊಲೀಸ್ ಸೆಂಟ್ರಲ್ ಡಿಸ್ಟ್ರಿಕ್ಟ್ನ ಬಾರ್ಡರ್ ಅಧಿಕಾರಿ ಕಿಮ್ ಡೋಕ್ರಾಕರ್ ಅ. 7 ರಂದು ನಡೆದ ದಾಳಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟ ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವನ್ನಪ್ಪಿದ್ದು, 9,600 ಜನ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಲಾಯ ಹೇಳಿದೆ.