ಆಸ್ಟ್ರೇಲಿಯಾ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್, ಐಸಿಸಿ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ದಿಗ್ಗಜ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಹಾಗೂ ಕುಮಾರ ಸಂಗಕ್ಕಾರ ಅವರೊಂದಿಗೆ ಎಲೈಟ್ ಲಿಸ್ಟ್ ಸೇರಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್, ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು. ಪಾಕ್ ತಂಡದ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ವಾರ್ನರ್, ಕೇವಲ 124 ಬಾಲ್‌ಗಳಲ್ಲಿ 14 ಬೌಂಡರಿ, 9 ಸಿಕ್ಸ್ ನೆರವಿನಿಂದ 163 ರನ್‌ಗಳನ್ನ ಸಿಡಿಸಿ ಸ್ಪೋಟಕ ಆಟವಾಡಿದರು. ವಾರ್ನರ್ ಅವರ ಅತ್ಯುತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 367/9 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ವಿಶ್ವಕಪ್‌ನ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ವಿಫಲವಾಗಿ ನಿರಾಸೆ ಅನುಭವಿಸಿದ್ದ ವಾರ್ನರ್, ದೊಡ್ಡ ಇನ್ನಿಂಗ್ಸ್ ಕಟ್ಟುವ ತವಕದಲ್ಲಿದ್ದರು. ಹೀಗಾಗಿ ನಿರೀಕ್ಷೆಯಂತೆ ಪಾಕಿಸ್ತಾನ್ ವಿರುದ್ಧ ಬ್ಯಾಟಿಂಗ್ ಲಯ ಕಂಡುಕೊಂಡು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಬಲವನ್ನ ಹೆಚ್ಚಿಸಿದರಲ್ಲದೆ, ಏಕದಿನ ವಿಶ್ವಕಪ್‌ನಲ್ಲಿ 5ನೇ ಶತಕ ಸಿಡಿಸಿ ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಹಾಗೂ ಕುಮಾರ ಸಂಗಕ್ಕಾರ ಅವರೊಂದಿಗೆ ಎಲೈಟ್ ಲಿಸ್ಟ್ ಸೇರಿದರು.
ಕೇವಲ 85 ಬಾಲ್‌ಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸ್ ಮೂಲಕ ಶತಕದ ಸಂಭ್ರಮ ಆಚರಿಸಿದ ವಾರ್ನರ್, ಸದ್ಯ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಶತಕ ದಾಖಲಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಲಿಸ್ಟ್‌ನಲ್ಲಿ ಪ್ರಸ್ತುತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಸ್ಥಾನದಲ್ಲಿದ್ದರೆ. ಭಾರತದ ಮಾಜಿ ಕ್ರಿಕೆಟಿಗ “ಕ್ರಿಕೆಟ್ ದೇವರು” ಸಚಿನ್ ತೆಂಡುಲ್ಕರ್ 2ನೇ ಸ್ಥಾನದಲ್ಲಿದ್ದಾರೆ.
AUS v PAK, Australia, Pakistan, David Warner, ODI World Cup