ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ, ಹಾಲಿ ಚಾಂಪಿಯನ್ನರ ವಿರುದ್ಧದ ತನ್ನ ಪ್ರಾಬಲ್ಯ ಮುಂದುವರಿಸಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ, 8 ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ 33.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು. ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ 25.4 ಓವರ್‌ಗಳಲ್ಲಿ 160/2 ರನ್‌ಗಳಿಸಿ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಶ್ರೀಲಂಕಾದ ಪರ ನಿಸ್ಸಂಕಾ(77*), ಸಮರವಿಕ್ರಮ(65*) ಬ್ಯಾಟಿಂಗ್‌ನಲ್ಲಿ ಮಿಂಚಿದರೆ. ಬೌಲಿಂಗ್‌ನಲ್ಲಿ ಲಹಿರು ಕುಮಾರ 3, ಮ್ಯಾಥೀವ್ಸ್ 2, ರಜಿತ 2 ಹಾಗೂ ತೀಕ್ಷಣ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಲಂಕಾದ ಗೆಲುವಿನ ಓಟ:
ಪ್ರಸಕ್ತ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಜಯಭೇರಿ ಬಾರಿಸಿದ ಶ್ರೀಲಂಕಾ, ಆ ಮೂಲಕ ಆಂಗ್ಲರ ವಿರುದ್ಧ ಗೆಲುವಿನ ಓಟ ಮುಂದುವರಿಸಿದೆ. 2007ರಿಂದ ಈವರೆಗೂ ಆಡಿರುವ 5 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಅಜೇಯ ಗೆಲುವಿನ ದಾಖಲೆ ಹೊಂದಿದೆ. 1996ರಿಂದ ಈವರೆಗೂ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಆರು ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಶ್ರೀಲಂಕಾ ಒಮ್ಮೆ ಮಾತ್ರ ಸೋಲಿನ ಆಘಾತ ಕಂಡಿದೆ.
ಕಳೆದ 5 ವಿಶ್ವಕಪ್ ಫಲಿತಾಂಶ:
2007 – ಶ್ರೀಲಂಕಾಗೆ 2 ರನ್‌ಗಳ ಜಯ
2011 – ಶ್ರೀಲಂಕಾಗೆ 10 ವಿಕೆಟ್‌ಗಳ ಜಯ
2015 – ಶ್ರೀಲಂಕಾಗೆ 9 ವಿಕೆಟ್‌ಗಳ ಜಯ
2019 – ಶ್ರೀಲಂಕಾಗೆ 20 ರನ್‌ಗಳ ಜಯ
2023 – ಶ್ರೀಲಂಕಾಗೆ 8 ವಿಕೆಟ್‌ಗಳ ಜಯ*
SL v ENG, CWC 2023, England, Sri Lanka, ODI World Cup