ಏಕದಿನ ವಿಶ್ವಕಪ್-2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿ 4 ದಿನಗಳು ಕಳೆದರು ಟೀಂ ಇಂಡಿಯಾ ಆಟಗಾರರಲ್ಲಿ ಸೋಲಿನ ಆಘಾತದ ನೋವು ಮರೆಯಾಗಿಲ್ಲ. ಇದರ ಪರಿಣಾಮವಾಗಿ ಭಾರತ ತಂಡದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.
ಅಹ್ಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ, ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಸೋಲಿನ ಆಘಾತ ಅನುಭವಿಸಿತು. ಈ ಸೋಲಿನ ಆಘಾತಕ್ಕೆ ಸಿಲುಕಿರುವ ಭಾರತದ ಆಟಗಾರರು ತಮ್ಮದೇ ರೀತಿಯಲ್ಲಿ ಸೋಲಿನ ಆಘಾತ ಹೊರಹಾಕಿದ್ದಾರೆ.
ಈ ನಡುವೆ ಟೀಂ ಇಂಡಿಯಾದ ವಿಕೆಟ್-ಕೀಪರ್ ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್, “ಇನ್ನೂ ನೋವುಂಟುಮಾಡುತ್ತಿದೆ” ಎಂಬ ಕ್ಯಾಪ್ಷನ್ ಜೊತೆಗೆ ವಿಶ್ವಕಪ್ ಫೈನಲ್ ಪಂದ್ಯದ ಫೋಟೋಗಳನ್ನ ತಮ್ಮ ‘X’ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಫೈನಲ್ ಸೋಲಿನ ನೋವನ್ನ ತೋಡಿಕೊಂಡಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್, ಫೈನಲ್‌ನಲ್ಲಿ ಭಾರತದ ಅಗ್ರ ಸ್ಕೋರರ್ ಆಗಿದ್ದರೂ, ಕೆಎಲ್ ರಾಹುಲ್ ಅಹಮದಾಬಾದ್‌ನಲ್ಲಿ ನಿಧಾನಗತಿಯ ನಾಕ್‌ಗಾಗಿ ಟೀಕೆಗಳನ್ನು ಎದುರಿಸಿದರು. ರಾಹುಲ್ 107 ಬಾಲ್‌ಗಳಲ್ಲಿ 66 ರನ್‌ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಕೇವಲ ಫೈನಲ್ ಮಾತ್ರವಲ್ಲದೇ ಪ್ರಸಕ್ತ ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್, ಉತ್ತಮ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಕ್ಕೆ ಬೆನ್ನೆಲುಬಾಗಿದ್ದರು.
IND v AUS, Team India, Australia, KL Rahul, T20I Series