ನವದೆಹಲಿ: ಲಾಕ್‌ಡೌನ್‌ನಿಂದಾಗಿ ಮಾರ್ಚ್20ರಿಂದ ದೇಶಾದ್ಯಂತ ಸ್ಥಗಿತಗೊಂಡಿರುವ ಸಾಮಾನ್ಯ ರೈಲುಗಳ ಸಂಚಾರ ಆಗಸ್ಟ್15ರವರೆಗೂ ಆರಂಭವಾಗುವುದು ಅನುಮಾನ ಎನ್ನಲಾಗಿದೆ.
ಕೇಂದ್ರ ಸರ್ಕಾರ ಜೂನ್30ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ, ಜೂ.30ರವರೆಗೆ ಸಾಮಾನ್ಯ ರೈಲುಗಳ ಓಡಾಟವನ್ನು ಬಂದ್ ಮಾಡಿದೆ. ಆದರೆ, ಜುಲೈನಿಂದ ರೈಲುಗಳ ಓಡಾಟ ಆರಂಭವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜುಲೈ 14ರವರೆಗೆ ಟಿಕೆಟ್ ಬುಕ್ಕಿಂಗ್ ಆರಂಭ ಮಾಡಿತ್ತು.
ಆದರೆ, ಇದೀಗ ರಿಸರ್ವೇಶನ್ ಮಾಡಿದ್ದ ಎಲ್ಲಾ ಬುಕ್ಕಿಂಗ್‌ಗಳನ್ನು ಕ್ಯಾನ್ಸಲ್ ಮಾಡಿ ಹಣ ಹಿಂತಿರುಗಿಸುವAತೆ ರೈಲ್ವೆ ಇಲಾಖೆ ಎಲ್ಲಾ ವಯಲಯಗಳಿಗೆ ಸುತ್ತೋಲೆ ಹೊರಡಿಸಿದೆ.
ಸದ್ಯ ಆಯಾ ರಾಜ್ಯ ಸರ್ಕಾರಗಳ ಬೇಡಿಕೆ ಮೇರೆಗೆ ಕೆಲ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಜತೆಗೆ 230 ಎಕ್ಸ್ ಪ್ರೆಸ್ ಹಾಗೂ ಮೇಲ್ ರೈಲು ಸದ್ಯ ಆಯಾ ರಾಜ್ಯದೊಳಗೆ ಸಂಚಾರ ಮಾಡುತ್ತಿವೆ. ಜುಲೈನಿಂದ ಈ ರೈಲುಗಳ ಸಂಚಾರ ಕೂಡ ಅನುಮಾನ ಎನ್ನಲಾಗಿದೆ.
ಶುಂಠಿ ಟೀಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು
ಚಳಿಗಾಲದಲ್ಲಿ, ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ಹಲವಾರು ಜನರು ಜ್ವರ, ಕೆಮ್ಮು, ಕಫ, ಮತ್ತು ಇತರ ರೋಗಗಳಿಗೆ...