ಪಾಕಿಸ್ತಾನ ವಿಮಾನ ದುರಂತಕ್ಕೆ ಕೊರೊನಾ ಕಾರಣ !
ಇಸ್ಲಾಮಾಬಾದ್, ಜೂನ್ 25: ಕಳೆದ ಮೇ 22ರಂದು ಲಾಹೋರ್ನಿಂದ ಕರಾಚಿಗೆ ಬರುತ್ತಿದ್ದ ಪಾಕಿಸ್ತಾನ ವಿಮಾನ ದುರಂತಕ್ಕೆ ಕಾರಣವೇನು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಪಾಕಿಸ್ತಾನ ಏರ್‌ಲೈನ್ಸ್(ಪಿಐಎ) ಮೇ 22 ರಂದು ಕರಾಚಿ ಏರ್ ಪೋರ್ಟ್ ನಲ್ಲಿ ಇಳಿಯತ್ತಿದ್ದಾಗ ದುರಂತಕ್ಕೀಡಾಗಿತ್ತು.
ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವ ಕೆಲವೇ ಕ್ಷಣಗಳ ಮುನ್ನ ಲ್ಯಾಂಡಿಂಗ್ ಸಾಧ್ಯವಾಗದೇ ಪಕ್ಕದ ಜನವಸತಿ ಪ್ರದೇಶದ ಮೇಲೆ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್‌ಲೈನ್ಸ್ ಅಪ್ಪಳಿಸಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಇಬ್ಬರನ್ನು ಬಿಟ್ಟು ಉಳಿದ 97 ಜನರು ಬಲಿಯಾಗಿದ್ದರು.

ಇದೀಗ ತನಿಖಾ ವರದಿಯಿಂದ ಹಲವು ನಿಗದಿತ ನಿಯಮಗಳ ಪಾಲನೆಯಾಗದಿರುವುದು ತಿಳಿದು ಬಂದಿದೆ. ವಿಮಾನ ಹಾರಾಟದ ವೇಳೆ ಪೈಲಟ್ಗಳು ತಮ್ಮ ಗಮನವನ್ನು ಕೇಂದ್ರೀಕರಿಸಿರಲಿಲ್ಲ, ಪ್ರಯಾಣದುದ್ದಕ್ಕೂ ಕೊರೊನಾವೈರಸ್ ವಿಷಯವಾಗಿ ಚರ್ಚೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಸಚಿವ ಗುಲಾಂ ಸರ್ವರ್ ಖಾನ್ ಸಂಸತ್ತಿಗೆ ವಿಮಾನ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಪೈಲಟ್ ಹಾಗೂ ಕಂಟ್ರೋಲರ್ ನಿಯಮವನ್ನು ಸರಿಯಾಗಿ ಪಾಲಿಸಿರಲಿಲ್ಲ, ಎಟಿಸಿ ಮೂಲಕ ನೀಡಲಾದ ನಿರ್ದೇಶನಗಳನ್ನು ಪೈಲಟ್ ಪಾಲಿಸಿಲ್ಲ ಅಲ್ಲದೇ
ಎಟಿಸಿ ಕೂಡ ಇಂಜಿನ್ಗೆ ಧಕ್ಕೆಯಾಗಿರುವುದನ್ನು ಪೈಲಟ್ಗೆ ತಿಳಿಸಿರಲಿಲ್ಲ ಎಂದು ಸಚಿವ ಗುಲಾಂ ಸರ್ವರ್ ಖಾನ್
ಹೇಳಿದ್ದಾರೆ.
ವಿಮಾನ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಕೊರೊನಾವೈರಸ್
ಬಗ್ಗೆ ಚರ್ಚೆ ನಡೆಸುತ್ತಿದ್ದು, ಅವರ ಕುಟುಂಬಗಳು ಸೋಂಕಿಗೆ ಒಳಗಾಗಿರುವ ಬಗ್ಗೆ ಸಂವಾದ ನಡೆದಿತ್ತು. ವಿಮಾನ ಲ್ಯಾಂಡಿಂಗ್ ಮಾಡುವಲ್ಲಿ ಪೈಲಟ್ಗಳು ತಮ್ಮ ಗಮನವನ್ನು ಕೇಂದ್ರೀಕರಿಸಿರಲಿಲ್ಲ. ಅಷ್ಟೇ ಅಲ್ಲ ವಿಮಾನವನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಹೇಳಿದಾಗಲೂ ಪೈಲಟ್ ನಾನು ನೋಡಿಕೊಳ್ಳುತ್ತೇನೆ ಎಂದು ಉತ್ತರಿಸಿದ್ದು ಇದು ಅತಿಯಾದ ಆತ್ಮವಿಶ್ವಾಸವಾಗಿತ್ತು ಎಂದು ಸಚಿವ ಗುಲಾಂ ಸರ್ವರ್ ಖಾನ್ ಸಂಸತ್ತಿಗೆ ಮಾಹಿತಿ ನೀಡಿದ್ದು ಕಳೆದ ಎಂಟು ವರ್ಷಗಳಿಂದ ಮೊದಲ ಬಾರಿ ಇಂತಹ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.








