ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ಮತ್ತೆ ಹೆಚ್ಚಾಗಿದ್ದು, ಇಂದು ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 329 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಗದಗ ಜಿಲ್ಲೆಯಲ್ಲಿ 48 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಅಲ್ಲದೇ, ಎಂದಿನಂತೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, 177 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1,181 ಸಕ್ರಿಯ ಪ್ರಕರಣಗಳಿವೆ. 283 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಹೊರತು ಪಡಿಸಿದರೆ, ಮೈಸೂರು 27, ಹಾಸನ 17, ತುಮಕೂರು 16, ಬಾಗಲಕೋಟೆ 10, ಮಂಡ್ಯ 10, ಬೆಂಗಳೂರು ಗ್ರಾಮಾಂತರ 8, ಚಿಕ್ಕಮಗಳೂರು 7, ಚಿತ್ರದುರ್ಗ 7, ಧಾರವಾಡ 7, ಉತ್ತರ ಕನ್ನಡ 6, ಚಾಮರಾಜನಗರ 5, ರಾಯಚೂರು 5, ಚಿಕ್ಕಬಳ್ಳಾಪುರ 4, ಕೋಲಾರ 4, ಕೊಪ್ಪಳ 4, ಬಳ್ಳಾರಿ 3, ಶಿವಮೊಗ್ಗ 3, ವಿಜಯನಗರ 3, ದಾವಣಗೆರೆ 2, ದಕ್ಷಿಣ ಕನ್ನಡ 1, ಗದಗ 1, ಕಲಬುರಗಿಯಲ್ಲಿ 1 ಪ್ರಕರಣ ಪತ್ತೆಯಾಗಿವೆ.








