ಇರಾಕ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ.
ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾಕ್ನ ಕುರ್ದಿಸ್ತಾನ್ನಲ್ಲಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (IRGC) ಹೇಳಿದೆ. ಈ ಸದ್ದು ಸಿರಿಯಾದ ಅಲೆಪ್ಪೊ ಗ್ರಾಮಾಂತರ ಪ್ರದೇಶದಲ್ಲಿ ಕೇಳಿ ಬಂದಿದೆ.
ಇರಾನ್ ವಿರೋಧಿಗಳ ಬೇಹುಗಾರಿಕೆ ಕೇಂದ್ರಗಳು ಮತ್ತು ಪಡೆಗಳನ್ನು ನಾಶಮಾಡಲು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್ನ ಕುರ್ದಿಸ್ತಾನ್ನ ರಾಜಧಾನಿ ಎರ್ಬಿಲ್ನಿಂದ ಈಶಾನ್ಯಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಯುಎಸ್ ಕಾನ್ಸುಲೇಟ್ ಮತ್ತು ನಾಗರಿಕರ ನಿವಾಸಗಳ ಹತ್ತಿರ ಇರುವ ಪ್ರದೇಶದಲ್ಲಿ ಸ್ಫೋಟಿಸಲಾಗಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಉದ್ಯಮಿ ಪೆಶ್ರಾ ದಿಜಾಯಿ ಹಾಗೂ ಅವರ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.








