ಬೆಳಗಾವಿ: ರಾಮಮಂದಿರದಲ್ಲಿ ರಾಮಲಲ್ಲಾ (RamLalla) ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ವಿಶ್ವದಾದ್ಯಂತ ನೆಲೆಸಿರುವ ರಾಮಭಕ್ತರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಗೋಕಾಕ್ ನಗರದ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪದಲ್ಲಿ ಸುಮಾರು 3 ಸಾವಿರ ಮಹಿಳೆಯರು ಏಕಕಾಲಕ್ಕೆ 108 ಬಾರಿ ಹನುಮಾನ್ ಚಾಲೀಸಾ (Hanuman Chalisa) ಪಠಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಿಕಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಒಂದೇ ರೀತಿಯ ವೇಷಭೂಷಣ ಧರಿಸಿ, ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು, 108 ಬಾರಿ ಹನುಮಾನ್ ಚಾಲೀಸಾ ಮಂತ್ರಪಠಣ ಮಾಡಿದ್ದಾರೆ.








