ಹುಬ್ಬಳ್ಳಿ: ಇಲ್ಲಿಯ ಮಿನಿ ವಿಧಾನಸೌಧದ ಎದುರು ವ್ಯಕ್ತಿಗಳು ಬಡಿದಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ತಂದೆ-ತಾಯಿಗೆ ತೊಂದರೆ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹನುಮಂತಪ್ಪ ಹಾಗೂ ಮಹೇಶ್ ಗೌಡ ಬಡಿದಾಡಿಕೊಂಡ ವ್ಯಕ್ತಿಗಳು ಎನ್ನಲಾಗಿದೆ. ತಂದೆ ತಾಯಿಗೆ ತೊಂದರೆ ಮಾಡಿದ್ದಾರೆ ಅದಕ್ಕೆ ಹೊಡೆದಿದ್ದೇನೆ ಎಂದು ಮಹೇಶ್ ಗೌಡ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವುದಕ್ಕಾಗಿ ಹನುಮಂತಪ್ಪ ಅವರು ಉಪನಗರ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾರೆ. ನಂತರ ಪೊಲೀಸರು ಈ ಜಗಳವನ್ನು ಬಿಡಿಸಿದ್ದಾರೆ.








