ಗದಗ: ಚಲಿಸುತ್ತಿದ್ದ ಸಂದರ್ಭದಲ್ಲಿಯೇ ಸಾರಿಗೆ ಬಸ್ ನ ಚಕ್ರ ಕಳಚಿ ಬಿದ್ದಿದ್ದು, ಪ್ರಯಾಣಿಕರು ಕಂಗಾಲಾಗುವಂತೆ ಮಾಡಿದೆ.
ಸಾರಿಗೆ ಬಸ್ ನ ಚಕ್ರ ಜಿಲ್ಲೆಯ ಶಿರಹಟ್ಟಿ (Shirahatti) ತಾಲೂಕಿನ ಮಾಗಡಿ ಹೊರವಲಯದಲ್ಲಿ ಕಳಚಿ ಬಿದ್ದಿತ್ತು. ಈ ಬಸ್ ಲಕ್ಷ್ಮೇಶ್ವರದಿಂದ ಮಾಗಡಿ ಮಾರ್ಗವಾಗಿ ಶಿರಹಟ್ಟಿಗೆ ತೆರಳುತ್ತಿದ್ದಾಗ ಬಸ್ ನ ಎಕ್ಸೆಲ್ ಕಟ್ಟಾಗಿ ಚಕ್ರ ಕಳಚಿ ಬಿದ್ದಿದೆ.
ಕೂಡಲೇ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








