ವಿಜಯಪುರ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿ ಅವಾಂತರಕ್ಕೆ ಕಾರಣವಾಗಿದ್ದಾನೆ.
ಗಾಳಿಯಲ್ಲಿ ಹಾರಿಸಿದ್ದ ಗುಂಡು ಗ್ರಾಪಂ ಅಧ್ಯಕ್ಷೆಗೆ ತಗುಲಿದ್ದು, ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಹಿರೆರೂಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಲ್ಲು ಗಿನ್ನಿ ಗುಂಡು ಹಾರಿಸಿದ ವ್ಯಕ್ತಿ.
ಗಾಳಿಯಲ್ಲಿ ಗುಂಡು ಹಾರಿಸಿದ ವೇಳೆ ಒಂದು ಗುಂಡು ಗ್ರಾಪಂ ಅಧ್ಯಕ್ಷೆ ಸೋಮವ್ವ (50) ಅವರ ತೊಡೆಗೆ ತಗುಲಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.