ಬೆಳಗಾವಿ: ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಪರಿಷತ್ ನಲ್ಲಿ ಮಾತನಾಡಿದ ಅವರು, ನ.11ರಂದು ಬಳ್ಳಾರಿ (Ballary) ಆಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 34 ಸಿಸೇರಿಯನ್ ಆಪರೇಷನ್‌ನಲ್ಲಿ 7 ಪ್ರಕರಣಗಳಲ್ಲಿ ತೊಂದರೆ ಆಗಿರುವುದು ನಿಜ.
ಮೂತ್ರಪಿಂಡ ತೊಂದರೆ, ಬಹು ಅಂಗಾಂಗ ವೈಫಲ್ಯತೆದಿಂದ 7 ಪ್ರಕರಣಗಳಲ್ಲಿ 5 ಬಾಣಂತಿಯರು ಸಾವನ್ನಪ್ಪಿದ್ದಾರೆ. 2 ಬಾಣಂತಿಯರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಿಂಗರ್ ಲ್ಯಾಕ್ವೆಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯತೆ ತೋರಿರುವ ಔಷಧಿ ನಿಯಂತ್ರಕರಾದ ಡಾ.ಉಮೇಶ್‌ರನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದಿದ್ದಾರೆ.